Asianet Suvarna News Asianet Suvarna News

ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಚಿವೆ ಜಯಮಾಲ ಗರಂ

ನನಗೆ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಕೆಲವರು ಜಯಮಾಲಾ ಸೇವೆ ಹೈಕಮಾಂಡ್‌ಗೆ ಇಷ್ಟವಾಗಿರಬೇಕು ಎಂಬ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಇಂತಹ ಪದ ಪ್ರಯೋಗ ನನಗೆ ಸರಿ ಎನಿಸಲಿಲ್ಲ. ಇದು ರಾಹುಲ್‌ ಗಾಂಧಿ ಅವರ ನಿರ್ಧಾರವನ್ನೇ ಪ್ರಶ್ನಿಸುವಂತಿದೆ. ವಿಧಾನಪರಿಷತ್‌ ಸಭಾನಾಯಕಿಯಾಗುವ ಶಕ್ತಿ ನನಗಿದೆ ಎಂದು ಖುದ್ದು ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಜಯಮಾಲಾ  ಹೇಳಿದ್ದಾರೆ.

Minister Jayamala Taunts Lakshmi Hebbalkar

ಬೆಂಗಳೂರು :  ನನಗೆ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಕೆಲವರು ಜಯಮಾಲಾ ಸೇವೆ ಹೈಕಮಾಂಡ್‌ಗೆ ಇಷ್ಟವಾಗಿರಬೇಕು ಎಂಬ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಇಂತಹ ಪದ ಪ್ರಯೋಗ ನನಗೆ ಸರಿ ಎನಿಸಲಿಲ್ಲ. ಇದು ರಾಹುಲ್‌ ಗಾಂಧಿ ಅವರ ನಿರ್ಧಾರವನ್ನೇ ಪ್ರಶ್ನಿಸುವಂತಿದೆ. ವಿಧಾನಪರಿಷತ್‌ ಸಭಾನಾಯಕಿಯಾಗುವ ಶಕ್ತಿ ನನಗಿದೆ ಎಂದು ಖುದ್ದು ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಜಯಮಾಲಾ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗತ್ತಲ್ಲಿ ಎಲ್ಲದಕ್ಕೂ ಔಷಧಿ ಇದೆ. ಆದರೆ, ಹೊಟ್ಟೆಕಿಚ್ಚಿಗೆ ಯಾವುದೇ ಔಷಧ ಇಲ್ಲ ಎಂದು ಖಾರವಾಗಿ ತಿಳಿಸಿದರು.

ಜಯಮಾಲಾ ಸೇವೆ ಪಕ್ಷದ ನಾಯಕರಿಗೆ ಇಷ್ಟಆಗಿದೆ. ಹಾಗಾಗಿಯೇ ಪಕ್ಷ ಸಚಿವ ಸ್ಥಾನ ನೀಡಿದೆ. ಇದಕ್ಕಾಗಿ ಯಾರೂ ಕೊಂಕು ಮಾತನಾಡುವ ಅಗತ್ಯವಿಲ್ಲ  ಎಂದು ಈ ಬಗ್ಗೆ ಟೀಕಾ ಮಾಡಿದ್ದ ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಪರೋಕ್ಷ ತಿರುಗೇಟು ನೀಡಿದರು.

‘ಹಿಂದೆ ಕಾಂಗ್ರೆಸ್‌ ಧ್ವನಿಪೆಟ್ಟಿಗೆಯಾಗಿದ್ದವರು ಒಂದು ಹೆಣ್ಣು ಎಂಬುದನ್ನು ಮರೆಯಬಾರದು. ನನಗೆ ಸಚಿವ ಸ್ಥಾನ ನೀಡಿರುವುದಕ್ಕೆ ಯಾರೂ ಕೂಡ ಉದ್ಧಟತದನ ಹೇಳಿಕೆಗಳನ್ನು ನೀಡುವುದು ತರವಲ್ಲ. ಇಂಧಿರಾಗಾಂಧಿ ಅವರು ಪಕ್ಷಕ್ಕೆ ಶಕ್ತಿ ತುಂಬಿದರು. ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಅವರು ಹೆಣ್ಣು. ಅವರು ಪಕ್ಷಕ್ಕೆ ಮರು ಚೈತನ್ಯ ನೀಡಿದರು. ನಾನು ಏನೂ ಗೊತ್ತಿಲ್ಲದೆ ರಾಜಕೀಯಕ್ಕೆ ಬಂದಿಲ್ಲ. ಸಚಿವೆಯಾಗಿ ಅಷ್ಟೇ ಅಲ್ಲ,

‘ನಾನೂ ಕೂಡ ಒಂದು ಹೆಣ್ಣು. ಸಚಿವೆಯಾಗಿ ಅಷ್ಟೇ ಅಲ್ಲ, ವಿಧಾನಪರಿಷತ್‌ ಸಭಾನಾಯಕಿಯಾಗಿ ಕೆಲಸ ಮಾಡುವ ಸಾಮರ್ಥ್ಯವೂ ನನಗಿದೆ. ಪಕ್ಷ ಅವಕಾಶ ನೀಡಿದರೆ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸಿ ತೋರಿಸುತ್ತೇನೆ’ ಎನ್ನುವ ಮೂಲಕ ತಮ್ಮ ಸಾಮರ್ಥ್ಯ ಪ್ರಶ್ನಿಸಿದ್ದಾರೆ ಎನ್ನಲಾದ ಎಚ್‌.ಎಂ. ರೇವಣ್ಣ ಅವರಿಗೆ ತಿರುಗೇಟು ನೀಡಿದರು.

ಹೆಬ್ಬಾಳ್ಕರ್‌ ಹೇಳಿದ್ದು

ನಾನು ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಿದ್ದೇನೆ. ಮಹಿಳಾ ಕಾಂಗ್ರೆಸ್‌ನ ಸ್ವರೂಪ ಬದಲಿಸಿದ್ದೇನೆ. ಆದರೆ, ಎಂಎಲ್‌ಸಿಗಳನ್ನು ಸಂಪುಟಕ್ಕೆ ಸೇರಿಸಲ್ಲ ಎಂದು ಜಯಮಾಲಾರನ್ನು ಮಂತ್ರಿ ಮಾಡಿದ್ದಾರೆ. ಬಹುಶಃ ರಾಜ್ಯ ನಾಯಕರಿಗೆ ಜಯಮಾಲಾ ಅವರ ಸೇವೆ ಬಹಳ ಇಷ್ಟಆಗಿರಬಹುದು. ಅದಕ್ಕೇ ಮಂತ್ರಿ ಮಾಡಿದ್ದಾರೆ.

ಜಯಮಾಲಾ ಸೇವೆ ಇಷ್ಟ ಆಗಿದ್ದಕ್ಕೆ ಸಚಿವ ಸ್ಥಾನ!

ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ಚಿತ್ರನಟಿ ಜಯಮಾಲಾ ಅವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಜೂನ್‌ 7ರಂದು ಆನ್‌ಲೈನ್‌ ಮಾಧ್ಯಮವೊಂದಕ್ಕೆ ಮಾತನಾಡಿ, ‘ನಮ್ಮ ರಾಜ್ಯ ನಾಯಕರು ಎಲ್ಲೋ ಅವರ ಸೇವೆ ಬಹಳ ಇಷ್ಟುಆಗಿರಬಹುದು ಅದಕ್ಕೋಸ್ಕರ ಮಾಡಿದ್ದಾರೆ.’ ಎಂದು ಹೇಳಿದ್ದು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಹೆಬ್ಬಾಳ್ಕರ್‌ ಹೇಳಿದ್ದು: ‘ಇವತ್ತು ಜಿಲ್ಲೆಯಲ್ಲಿ ಸಂಘಟನೆ ಮಾಡಿದ್ದು ಯಾರು ಅಂತ ಕೇಳಿದ್ರೆ ಚಿಕ್ಕ ಮಗು ಕೂಡ ಹೇಳುತ್ತೆ. ಅಲ್ಲಿಂದ ಇಲ್ಲಿ ಬಂದು ಇಲ್ಲಿ ರಾಜ್ಯದಲ್ಲಿ ನಾನೇನೂ ಯಾವ ರೀತಿ ಕೆಲಸ ಮಾಡಿದ್ದೀನಿ, ಮಹಿಳಾ ಕಾಂಗ್ರೆಸ್‌ಗೆ ಎಷ್ಟುಜನ ಕರ್ಕೊಂಡು ಬಂದಿದ್ದೀನಿ, ಮಹಿಳಾ ಕಾಂಗ್ರೆಸ್‌ನ ಶೇಪ್‌ನ ಯಾವ ರೀತಿ ಚೇಂಜ್‌ ಮಾಡಿದೀನಿ ಅಂತ.

ಇದನ್ನೆಲ್ಲಾ ಪರಿಗಣಿಸಬಹುದಿತ್ತು. ನನಗಂತೂ ಬಹಳ ವಿಶ್ವಾಸ ಇತ್ತು. ಇವನ್ನೆಲ್ಲಾ ಪರಿಗಣಿಸ್ತಾರೆ ಅಂತ ಹೇಳಿ. ಲಾಸ್ಟ್‌ ಟೈಮ್‌ ಮೋಟಮ್ಮ ಅವ್ರು ಎಂಎಲ್‌ಸಿ ಆಗಿದ್ರು, ಸೀನಿಯರ್‌ ಇದ್ರು, ಸಿಡಬ್ಲ್ಯೂಸಿ ಮೆಂಬರ್‌ ಆದಂತವವರು. ಅವ್ರು ನನ್ನನ್ನ ಮಂತ್ರಿ ಮಾಡಿ ಅಂದಿದ್ದಕ್ಕೆ ಇಲ್ಲ, ಎಂಎಲ್‌ಸಿಗಳನ್ನು ಮಂತ್ರಿ ಮಾಡೊಲ್ಲ ಅಂದ್ರು. ಇವತ್ತು ನೋಡಿದ್ರೆ ಜಯಮಾಲಾ ಎಂಎಲ್‌ಸಿ, ಅವ್ರನ್ನ ಮಂತ್ರಿ ಮಾಡ್ತಾರೆ. ಏನ್‌ ಏನ್‌ ಕ್ರೈಟೀರಿಯಾ ಇದೆ ಅಂತ ಗೊತ್ತಾಗ್ತಾ ಇಲ್ಲ. ಬಹುಶಃ ಜಯಮಾಲಾ ಅವ್ರ ಸೇವೆ ಅಥವಾ ಜಯಮಾಲಾ ಅವರ ಹೆಸರಿನಿಂದ ಪಕ್ಷಕ್ಕೆ ಅನುಕೂಲ ಆಗಬಹುದು ಅಂತ ಹೈಕಮಾಂಡ್‌ ವಿಚಾರ ಮಾಡಿರಬಹುದು.

ನಮ್ಮ ರಾಜ್ಯ ನಾಯಕರು ವಿಚಾರ ಮಾಡಿರಬಹುದು, ಎಲ್ಲೋ ಅವರ ಒಂದು ಸೇವೆ ಬಹಳ ಇಷ್ಟಆಗಿರಬಹುದು. ಅದಕ್ಕೋಸ್ಕರ ಮಾಡಿದಾರೆ. ಅವ್ರಿಂದ ನಮ್ಮ ಪಕ್ಷಕ್ಕೆ ಒಳ್ಳೇ ಹೆಸ್ರು ಬಂದು ಸಂಘಟನೆ ಜಯಮಾಲಾ ಅವ್ರಿಂದ ಒಂದು ಇಡೀ ಹೆಣ್ಣು ಮಕ್ಕಳ ಸಂಘಟನೆ ಜೋರಾಗಿ ಆಗ್ಲಿ ಅಂತ ಅಷ್ಟೇ ನಾನು ಆಸೆ ಪಡೋದು. 20 ವರ್ಷಗಳಿಂದ ರಾಜಕೀಯದಲ್ಲಿದ್ದೀನಿ. ನಾನೇನು ಮೂರ್ಖಳಲ್ಲ. ಮೊದಲನೇ ಸಲ ಮಂತ್ರಿ ಮಾಡಿ ಅಂತ ಕೇಳೋಕೆ. ಅವಕಾಶ ಇತ್ತಲ್ಲಾ ಯಾರೂ ರಿಪೀಟ್‌ ಆಗಿರಲಿಲ್ಲ. ಇರೋದು ನಾಲ್ಕು ಜನ. ಡೆಲ್ಲಿನಲ್ಲೂ ಕೂಡ ನನಗೆ ಮಾಡ್ತೀವಿ ಅಂತ ಹೇಳಿ ಕಳ್ಸಿದ್ರು. ಲಾಸ್ಟ್‌ ಕೊನೆಗಳಿಗೆ ಅಲ್ಲಿ ಅದೇನಾಯ್ತೋ...ಅದೇನ್‌ ಕತೆ ಆಯ್ತೋ ನನಗೆ ಅರ್ಥ ಆಗ್ತಾ ಇಲ್ಲ.’ ಎಂದು ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದರು.

Follow Us:
Download App:
  • android
  • ios