ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಸಚಿವ ಟಿಬಿ ಜಯಚಂದ್ರರ ಆಪ್ತ ಚನ್ನನಕುಂಟೆ ತಿಪ್ಪೇಶ್, ನವ ವಧುವನ್ನೇ ಕಿಡ್ನಾಪ್ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಶಿರಾ ತಾಲೂಕಿನ ಕಗ್ಗಲವಾಡಾದ ವೀಣಾ ಎಂಬ ಯುವತಿಯನ್ನು, ಶಿರಾ ಪಟ್ಟಣದ ಮಹೇಶ್ ಎಂಬ ಯುವಕನಿಗೆ ಕೊಟ್ಟು ಮೇ 21ರಂದು ಮದುವೆ ಮಾಡಲಾಗಿತ್ತು. ಮದುವೆಯಾಗಿ 9ನೇ ದಿನಕ್ಕೆ ಫಸ್ಟ್ ನೈಟ್ ನಡೆಯಬೇಕಿತ್ತು. ಆದರೆ, ಫಸ್ಟ್ ನೈಟ್ ದಿನವೇ ಜಯಚಂದ್ರರ ಬಂಟ ತಿಪ್ಪೇಶ್ ವೀಣಾಳನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ವೀಣಾಳ ಕುಟುಂಬಸ್ಥರು ಆರೋಪಿಸಿದ್ದರು.
ತುಮಕೂರು(ಅ.06): ತುಮಕೂರು ಜಿಲ್ಲೆ ಶಿರಾ ಪಟ್ಟಣದಲ್ಲಿ ಸಚಿವ ಟಿಬಿ ಜಯಚಂದ್ರರ ಆಪ್ತ ಚನ್ನನಕುಂಟೆ ತಿಪ್ಪೇಶ್, ನವ ವಧುವನ್ನೇ ಕಿಡ್ನಾಪ್ ಮಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಶಿರಾ ತಾಲೂಕಿನ ಕಗ್ಗಲವಾಡಾದ ವೀಣಾ ಎಂಬ ಯುವತಿಯನ್ನು, ಶಿರಾ ಪಟ್ಟಣದ ಮಹೇಶ್ ಎಂಬ ಯುವಕನಿಗೆ ಕೊಟ್ಟು ಮೇ 21ರಂದು ಮದುವೆ ಮಾಡಲಾಗಿತ್ತು. ಮದುವೆಯಾಗಿ 9ನೇ ದಿನಕ್ಕೆ ಫಸ್ಟ್ ನೈಟ್ ನಡೆಯಬೇಕಿತ್ತು. ಆದರೆ, ಫಸ್ಟ್ ನೈಟ್ ದಿನವೇ ಜಯಚಂದ್ರರ ಬಂಟ ತಿಪ್ಪೇಶ್ ವೀಣಾಳನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ವೀಣಾಳ ಕುಟುಂಬಸ್ಥರು ಆರೋಪಿಸಿದ್ದರು.
ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಕಾಣೆಯಾಗಿರುವ ವೀಣಾ ಖುದ್ದು ವಿಡಿಯೋ ಮಾಡಿದ್ದಾಳೆ. ಅತ್ತೆ ಸಿದ್ದಗಂಗಮ್ಮ ಚಿತ್ರಹಿಂಸೆ ಮಾಡಿ ತನ್ನ ಮಗ ಮಹೇಶನೊಂದಿಗೆ ಮದುವೆ ಮಾಡಿದ್ದಾಳೆ ಎಂದು ವೀಣಾ ಆರೋಪಿಸಿದ್ದಾಳೆ. ಅಲ್ಲದೇ ತಿಪ್ಪೇಶ್ ಹಾಗೂ ನಾನು ಪ್ರೀತಿಸಿ ಮೊದಲೇ ಮದುವೆಯಾಗಿದ್ದೇವೆ. ಆದರೂ ನನ್ನನ್ನು ಬಲವಂತ ಮಾಡಿ ಮಹೇಶ್ ಜೊತೆ ಮದುವೆ ಮಾಡಿಸಿದ್ದಾರೆ. ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ ಎಂದು ವೀಣಾ ಸ್ಪಷ್ಟಪಡಿಸಿದ್ದಾಳೆ. ಅತ್ತೆ ಸಿದ್ದಗಂಗಮ್ಮ ತನ್ನ ಮಗ ಮಹೇಶ್ ಜೊತೆ ಸೇರಿ ನನಗೆ ಮಚ್ಚಿನಿಂದ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಅಂತ ಆರೋಪಿಸಿದ್ದಾಳೆ.
ಅಲ್ಲದೇ ಸಿದ್ದಗಂಗಮ್ಮ ನನ್ನನ್ನು ವೇಶ್ಯಾವಾಟಿಕೆ ದಂಧೆಗೆ ಇಳಿಸಲು ಮುಂದಾಗಿದ್ದಳು, ಇದರಿಂದ ಭಯಭೀತಗೊಂಡು ನಾನು ಅವರಿಂದ ತಪ್ಪಿಸಿಕೊಂಡು ಮನೆಯಿಂದ ಹೊರಬಂದೆ ಎಂದು ಹೇಳಿದ್ದಾಳೆ. ಪತಿ ತಿಪ್ಪೇಶ್ ಹಾಗೂ ನನಗೆ ಜೀವ ಭಯ ಇದ್ದು, ಪೊಲೀಸರು ತಮಗೆ ರಕ್ಷಣೆ ನೀಡಬೇಕು ಎಂದು ವಿಡಿಯೋ ಮಾಡಿದ್ದಾಳೆ..
