ನೀರಿಗಾಗಿ ಕಿಲೋ ಮೀಟರ್​ಗಟ್ಟಲೇ ನಡೆಯುತ್ತಾ, ಕರುಳ ಬಳ್ಳಿ ಕಳೆದುಕೊಳ್ಳುತ್ತಿರುವ ಮಹಿಳೆಯರು ಹಾಗೂ ನೊಂದ ಹೆಣ್ಣುಮಕ್ಕಳ ಸಮಸ್ಯೆಯನ್ನು ಸುವರ್ಣ ನ್ಯೂಸ್ ವಿಸ್ತೃತವಾಗಿ ಪ್ರಸಾರ ಮಾಡಿತ್ತು.

ಬೆಳಗಾವಿ(ಮಾ.17): ಜಿಲ್ಲೆಯ ಹೊಸವಂಟುಮುರಿ ಗ್ರಾಮದ ಮಹಿಳೆಯರ ಕಣ್ಣೀರಿಗೆ ಕರಗದ ಸಚಿವ ಬೇಜವಾಬ್ದಾರಿ ಉತ್ತರ ನೀಡಿದ್ದಾರೆ.

ನೀರಿಗಾಗಿ ಕಿಲೋ ಮೀಟರ್​ಗಟ್ಟಲೇ ನಡೆಯುತ್ತಾ, ಕರುಳ ಬಳ್ಳಿ ಕಳೆದುಕೊಳ್ಳುತ್ತಿರುವ ಮಹಿಳೆಯರು ಹಾಗೂ ನೊಂದ ಹೆಣ್ಣುಮಕ್ಕಳ ಸಮಸ್ಯೆಯನ್ನು ಸುವರ್ಣ ನ್ಯೂಸ್ ವಿಸ್ತೃತವಾಗಿ ಪ್ರಸಾರ ಮಾಡಿತ್ತು. ಇದಕ್ಕಾಗಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ವಾಹಿನಿ ಪ್ರಶ್ನಿಸಿದಾಗ '‘ನಾವು ದೇವರಲ್ಲ ಕೂಡಲೇ ಸಮಸ್ಯೆ ಬಗೆಹರಿಸಲು’ ಸಮಸ್ಯೆಗೆ ನೀವೇ ಪರಿಹಾರ ಹೇಳಿ' ಎಂದು ಉಡಾಫೆಯಿಂದ ಉತ್ತರಿಸಿದ್ದಾರೆ.