ಮಾಧ್ಯಮದ ವಿರುದ್ಧ ಗರಂ ಆದ ಸಚಿವ ಜಾರ್ಜ್

Minister George Lash out Media
Highlights

ಮಾಧ್ಯಮದ ವಿರುದ್ಧ ಗರಂ ಆದ ಸಚಿವ ಜಾರ್ಜ್

ಬೆಂಗಳೂರು: ಗಣಪತಿ ಆತ್ಮಹತ್ಯೆ ಪ್ರಕರಣ ವಿಚಾರಣೆಗಾಗಿ ಸಿ.ಬಿ.ಐ ನೋಟಿಸ್ ಜಾರಿ ಹಿನ್ನಲೆಯಲ್ಲಿ ಮಾಧ್ಯಮದ ಮುಂದೆ ಸಚಿವ ಕೆ.ಜೆ ಜಾರ್ಜ್ ಗರಂ ಆದರು.

ನೋಟಿಸ್ ಜಾರಿ ಹಿನ್ನಲೆಯಲ್ಲಿ ಮಾಧ್ಯಮದವರು ಸಚಿವರನ್ನು ಪ್ರಶ್ನೆ ಕೇಳಿದಾಗ, ನೀವು ನನ್ನ ಹತ್ತಿರ ಪ್ರಶ್ನೆ ಕೇಳಲೇ ಬಾರದು ಸಿ.ಬಿ.ಐ ನನ್ನನ್ನು ಕರೆಯಬಹುದು ಅಥವಾ ನನ್ನ ಪಿಎಸ್ ಕರೆಯಬಹುದು ಅದು ಸಿ.ಬಿ.ಐಗೆ ಬಿಟ್ಟ ವಿಚಾರ. ಅದೆಲ್ಲಾ ನಿಮಗೆ ಯಾಕೆ ? ಅದನ್ನೆಲ್ಲ ನೀವು ನನ್ನ ಬಳಿ ಕೇಳೊದೆ ತಪ್ಪು. ಕೇಳಬಾರದು. ಒಂದೊಂದನ್ನು ಬ್ರೇಕಿಂಗ್ ನ್ಯೂಸ್ ಮಾಡಬೇಕಾ? ವರದಿ ಬರುವವರೆಗೂ ಕಾಯಿರಿ. ವರದಿ ಬಂದ ಮೇಲೆ ಏನ್ ಸುದ್ದಿ ಹಾಕ್ತಿರಾ ನಿಮಗೆ ಬ್ರೇಕಿಂಗ್ ಸುದ್ದಿಗೋಸ್ಕರ ನನ್ನ ವಿಷಯ ತಗೊತಿರಿ. ನಿಮಗೆ ಬೇರೆ ವಿಷಯ ಇಲ್ಲವೆ ? ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದರು.

loader