Asianet Suvarna News Asianet Suvarna News

‘ಖದರ್ ಮಿನಿಸ್ಟರ್’ ಡಿಕೆಶಿ ಬಾಲ್ಯ ಹೇಗಿತ್ತು? ಯೌವನದ ಕ್ರೇಜ್ ಏನಿತ್ತು?

ರಾಜ್ಯರಾಜಕಾರಣದಲ್ಲಿ ಸದ್ಯ ಪ್ರಭಾವಿ ರಾಜಕಾರಣಿ ಡಿ.ಕೆ.ಶಿವಕುಮಾರ್. ಕಳೆದ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಪವರ್ ಮಿನಿಸ್ಟರ್ ಆಗಿದ್ದ ಡಿಕೆಶಿ, ಈಗಿನ ಮೈತ್ರಿ ಸರ್ಕಾರದಲ್ಲಿ  ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾರೆ. ಸುವರ್ಣನ್ಯೂಸ್‌ನ ಹಲೋ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಕಿವಿಯಾದ ಡಿಕೆಶಿ, ತಮ್ಮ ಖಾಸಗಿ ಬದುಕಿನ ಕೆಲವು ನೆನಪುಗಳನ್ನು ಮೆಲುಕು ಹಾಕಿಕೊಂಡಿದ್ದಾರೆ.  

Minister DK Shivakumars Childhood and Craze During Youthhood
Author
Bengaluru, First Published Sep 8, 2018, 4:13 PM IST

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ರಾಜ್ಯದ ಪ್ರಭಾವಿ ರಾಜಕಾರಣಿ. ಮಗ ಚೆನ್ನಾಗಿ ಓದಿ ಸರ್ಕಾರಿ ಅಧಿಕಾರಿಯಾಗಬೇಕೆಂದು ಅಮ್ಮ ಬಯಸಿದರೆ, ಡಿಕೆಶಿ ನೆಚ್ಚಿಕೊಂಡದ್ದು ರಾಜಕಾರಣ! ಬಂಗಾರಪ್ಪರ ಗರಡಿಯಲ್ಲಿ ಪಳಗಿದ ಡಿಕೆಶಿ 28ನೇ ವಯಸ್ಸಿನಲ್ಲೇ ಸಚಿವರಾದವರು.

ಅಪ್ಪ ಬಯಸಿದ್ದು ಮಗ ಇಂಜಿನಿಯರ್ ಆಗಬೇಕೆಂದು. ಅದು ನನಸಾಗದಿದ್ದರೇನು?, ಡಿಕೆಶಿ ಇಂಜಿನಿಯರಿಂಗ್ ಕಾಲೇಜನ್ನೇ ತೆರೆದು ಸಾವಿರಾರು ಇಂಜಿನಿಯರ್‌ಗಳನ್ನು ಸಮಾಜಕ್ಕೆ ನೀಡುವ ಕೆಲಸ ಮಾಡಿದರು. ತಮ್ಮ ರಾಜಕೀಯ ಜೀವನದಲ್ಲಿ ಹಲವಾರು ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ವಿವಿಧ ಇಲಾಖೆಗಳ ಮಂತ್ರಿಯಾಗಿ ರಾಜ್ಯ-ರಾಷ್ಟ್ರರಾಜಕಾರಣದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ ಡಿಕೆಶಿ.  ಅವರ ಬಗ್ಗೆ ಇನ್ನಷ್ಟು ಕುತೂಹಲಕಾರಿ ವಿಷಯಗಳು ಇಲ್ಲಿದೆ...

   

Follow Us:
Download App:
  • android
  • ios