ಬೆಂಗಳೂರು[ಜು. 09]  ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿಕೆಶಿ ಮಹತ್ವದ ಮಾತುಕತೆ ನಡೆಸಿದ್ದು ಬಿಜೆಪಿಯ ಆಟಕ್ಕೆ ಪ್ರತಿತಂತ್ರ ರೂಪಿಸಿದ್ದಾರೆ.

ಜೆಡಿಎಸ್‌ ನಿಂದ ಮುಂಬೈಗೆ ಯಾವ ಯಾವ ನಾಯಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು?  ಮುಂಬೈ ರೆಸಾರ್ಟ್ ನಲ್ಲಿರುವ ಅತೃಪ್ತ ಶಾಸಕರನ್ನು ಮನವೊಲಿಸಲು ಏನು ಮಾಡಬೇಕು? ಎಂಬುದರ ಬಗ್ಗೆ   ಚರ್ಚೆ ನಡೆಸಿದ್ದಾರೆ.

ಶಾಸಕರ ರಾಜೀನಾಮೆ ಮುಂದೇನು?  ಕಾನೂನು ಮತ್ತು ಸಂವಿಧಾನ ಏನು ಹೇಳುತ್ತದೆ?

ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ ಡಿಕೆಶಿ ಹಾಗೂ ಸಿಎಂ ಕುಮಾರಸ್ವಾಮಿ ರಿವರ್ಸ್ ಆಪರೇಶನ್ ಮಾಡುವ ಬಗ್ಗೆಯೂ ಪ್ಲ್ಯಾನ್ ರೂಪಿಸಿದ್ದಾರೆ.  ಬಿಜೆಪಿಯಲ್ಲಿರುವ ಕೆಲ ಶಾಸಕರನ್ನು ಸೆಳೆಯುವ ಬಗ್ಗೆ ಮಾತುಕತೆ ನಡೆದಿದದ್ದು ನಾಳೆ ಶಿವಕುಮಾರ್ ಏನು ಮಾಡುತ್ತಾರೆ ಎಂಬುದರ ಮೇಲೆ ದೋಸ್ತಿ ಸರಕಾರದ ಭವಿಷ್ಯ ನಿಂತಿದೆ.