ಮಾಜಿ  ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಯಾಕೆ ಅಂತಹ ಹೇಳಿಕೆ ನೀಡಿದ್ದಾರೆ ಅಂತಾ ಗೊತ್ತಿಲ್ಲಾ. ಕಾಂಗ್ರೆಸ್ ಪಕ್ಷದಲ್ಲಿ ಅಂತಹ ಸಂಸ್ಕೃತಿ ಇಲ್ಲವೇ ಇಲ್ಲಾ

ಚಿಕ್ಕಬಳ್ಳಾಪುರ(ಅ.18): ನಾನು ಹಣ ಕೊಟ್ಟು ಮಂತ್ರಿಯಾದವನಲ್ಲಾ ಮೆರಿಟ್ ಮೇಲೆ ಸಚಿವನಾಗಿರುವವನು ಎನ್ನುವ ಮೂಲಕ ಮಾಜಿ ಸಚಿವ ಶ್ರೀನಿವಾಸ್ ಹೇಳಿಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರು ಯಾಕೆ ಅಂತಹ ಹೇಳಿಕೆ ನೀಡಿದ್ದಾರೆ ಅಂತಾ ಗೊತ್ತಿಲ್ಲಾ. ಕಾಂಗ್ರೆಸ್ ಪಕ್ಷದಲ್ಲಿ ಅಂತಹ ಸಂಸ್ಕೃತಿ ಇಲ್ಲವೇ ಇಲ್ಲಾ ಎಂದಿದ್ದಾರೆ. ನಿನ್ನೆ ರಾಜೀನಾಮೆ ನೀಡಿದ ಬಳಿಕ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ರಾಜ್ಯ ಸಚಿವ ಸಂಪುಟದಲ್ಲಿ ಪೇಮೆಂಟ್‌ ಸೀಟ್‌ಗಳಿವೆ ಎಂದು ಆರೋಪ ಮಾಡಿದ್ದರು.