ಕೊಪ್ಪಳ (ಅ.01): ಕೊಪ್ಪಳದಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಕಾರು ಗುಂಡಿಗೆ ಸಿಕ್ಕಿ ಹಾಕಿಕೊಂಡ ಘಟನೆ ನಡೆದಿದೆ.
ಕೊಪ್ಪಳದ ಗಣೇಶ ನಗರದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸುವ ವೇಳೆ ಒಳಚರಂಡಿ ಕಾಮಗಾರಿಯ ಗುಂಡಿಗೆ ಸಚಿವರ ಕಾರು ಸಿಕ್ಕಿ ಹಾಕಿಕೊಂಡಿದೆ. ಸಾರ್ವಜನಿಕರು ಎಷ್ಟೇ ಪ್ರಯತ್ನಿಸಿದರೂ ಕಾರನ್ನು ಮೇಲೆತ್ತಲು ಸಾಧ್ಯವಾಗಿಲ್ಲ. ಕೊನೆಗೆ ಸಚಿವರು ಬೇರೊಂದು ಕಾರಿನಲ್ಲಿ ಹೊರಡಬೇಕಾಯಿತು.
ಬಳಿಕ ನಗರಸಭೆ ಜೆಸಿಬಿ ಮೂಲಕ ಇನ್ನೋವಾ ಕಾರನ್ನು ಹೊರತೆಗೆಯಲಾಯಿತು.
