ಕಾರು ಮತ್ತು ಮಾರುತಿ ಓಮ್ನಿ ಕಾರಿನ ನಡುವೆ ಸೋಮವಾರ ಪುತ್ತೂರು ನಗರದ ಬೈಪಾಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ

ಪುತ್ತೂರು(ಮಾ.13): ಮಾಜಿ ಸಚಿವ, ಕಾಪು ಶಾಸಕ ವಿನಯಕುಮಾರ್ ಸೊರಕೆ ಅವರು ಪ್ರಯಾಣಿಸುತ್ತಿದ್ದ ಕಾರು ಮತ್ತು ಮಾರುತಿ ಓಮ್ನಿ ಕಾರಿನ ನಡುವೆ ಸೋಮವಾರ ಪುತ್ತೂರು ನಗರದ ಬೈಪಾಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಸೊರಕೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಎರಡೂ ಕಾರುಗಳ ಚಾಲಕರು ಗಾಯಗೊಂಡಿದ್ದಾರೆ. ವಿನಯಕುಮಾರ್ ಸೊರಕೆ ಅವರು ಸೋಮವಾರ ತಮ್ಮ ಊರಿಗೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸೊರಕೆ ಅವರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾದರು. ಆದರೆ ಅವರ ಕಾರಿನ ಚಾಲಕ ಸಚಿನ್ ಶೇಟ್ ಮತ್ತು ಓಮ್ನಿ ಚಾಲಕ ಶಾಂತಿಗೋಡು ಗ್ರಾಮದ ವೀರಮಂಗಲದ ರವೀಂದ್ರ ಅವರು ಗಾಯಗೊಂಡಿದ್ದಾರೆ. ಅಪಘಾತದಿಂದ ಸೊರಕೆ ಅವರ ಇನ್ನೋವಾ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred