ದೇಶದ ಹೊಲಸನ್ನು ತೊಳೆದಿರುವ ಜಾತಿಗೆ ಸಿಎಂ ಪಟ್ಟಬೇಕು.

ತುಮಕೂರು(ಫೆ.19): ದಲಿತ ಮುಖ್ಯಮಂತ್ರಿ ಬೇಕೆಂದು ಯಾರೋ ಒಬ್ಬರು ಕೂಗಿದರೆ ಸಾಲದು, ರಾಜ್ಯದ ಜನ ಕೂಗಬೇಕು. ಆಗ ದಲಿತರೊಬ್ಬರು ಸಿಎಂ ಆಗಲು ಸಾಧ್ಯ ಎಂದು ಸಮಾಜಕಲ್ಯಾಣ ಸಚಿವ ಎಚ್‌.ಆಂಜನೇಯ ಹೇಳಿದರು.

ತುಮಕೂರು ವಿವಿ ಕ್ಯಾಂಪಸ್‌ ನಿರ್ಮಾಣ ಶಂಕುಸ್ಥಾಪನೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಹೊಲಸನ್ನು ತೊಳೆದಿರುವ ಜಾತಿಗೆ ಸಿಎಂ ಪಟ್ಟಬೇಕು. ಪ್ರಧಾನಿ ಪಟ್ಟಬೇಕು ಎಂದು ರಾಜ್ಯ, ದೇಶದ ಜನ ಕೂಗಬೇಕು. ಹಾಗೆ ನೋಡಿದರೆ, ಬಾಬು ಜಗಜೀವನ್‌ರಾಂ ಅವರು ಪ್ರಧಾನಿಯಾಗಿ ಬಹುಕಾಲ ಆಳ್ವಿಕೆ ನಡೆಸಬೇಕಿತ್ತು ಎಂದರು.