ನಾವು ಹಿಂದೂಗಳ ಪ್ರಕರಣಗಳನ್ನು ವಾಪಸ್ ಪಡೆದಿದ್ದೇವೆಂದು ಸಿಎಂ ನಡೆಯನ್ನು ಸಮರ್ಥಿಸಿಕೊಂಡ ಆಂಜನೇಯ

First Published 26, Jan 2018, 12:39 PM IST
Minister Anjaneya Defends CM Siddharamaiah Step
Highlights

ಕೋಮು ಗಲಭೆ ಪ್ರಕರಣಗಳಲ್ಲಿ ಭಾಗಿಯಾದ ಅಲ್ಪಸಂಖ್ಯಾತರ ಮೇಲಿನ ಕೇಸುಗಳನ್ನು ತೆರವು ಗೊಳಿಸುವ ವಿಚಾರಕ್ಕೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಪ್ರತಿಕ್ರಿಯಿಸಿದ್ದಾರೆ.

ಚಿತ್ರದುರ್ಗ (ಜ.26):  ಕೋಮು ಗಲಭೆ ಪ್ರಕರಣಗಳಲ್ಲಿ ಭಾಗಿಯಾದ ಅಲ್ಪಸಂಖ್ಯಾತರ ಮೇಲಿನ ಕೇಸುಗಳನ್ನು ತೆರವು ಗೊಳಿಸುವ ವಿಚಾರಕ್ಕೆ ಸಮಾಜ ಕಲ್ಯಾಣ ಸಚಿವ ಆಂಜನೇಯ ಪ್ರತಿಕ್ರಿಯಿಸಿದ್ದಾರೆ.

ಹಿಂದೂ, ಮುಸ್ಲಿಂ ಎಂಬ ಭೇದ ಭಾವ ಇಲ್ಲ. ಯಾವುದಾದರೂ  ಕೋಮು ಘರ್ಷಣೆಯಲ್ಲಿ ಅನಾವಶ್ಯಕವಾಗಿ ಕೇಸು ದಾಖಲಾಗಿದ್ದರೆ ವಾಪಾಸ್ ಪಡೆಯುವ ಪ್ರಕ್ರಿಯೆ ಮೊದಲಿಂದಲೂ ನಡೆದಿದೆ. ನಾವು ಹಿಂದೂಗಳ ಕೇಸುಗಳನ್ನು ವಾಪಾಸ್ ತೆಗೆದುಕೊಂಡಿದ್ದೇವೆ. ಮುಸ್ಲಿಮರ ಕೇಸುಗಳನ್ನ ವಾಪಾಸ್ ಪಡೆದಿದ್ದೇವೆ.  ಕನ್ನಡ ಪರ ಹೋರಾಟಗಾರರು, ರೈತಪರ ಚಳುವಳಿಗಾರರು, ದಲಿತ ಪರ ಇರುವ ಸಂಘಟನೆಗಳ ಮೇಲಿರೋ ಕೇಸುಗಳನ್ನು ಕೂಡ ವಾಪಾಸ್ ಪಡೆದಿದ್ದೇವೆ ಎಂದು ಆಂಜನೇಯ ಹೇಳಿದ್ದಾರೆ.

ವಾಪಾಸ್ ಪಡೆಯಲು ಅರ್ಹತೆಯುಳ್ಳ ಎಲ್ಲಾ ಕೇಸುಗಳನ್ನು ವಾಪಾಸ್ ಪಡೆಯುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.  ಮಹಾದಾಯಿ ಹೋರಾಟಗಾರರ ಮೇಲಿರುವ ಕೇಸುಗಳ ಬಗ್ಗೆ ಸಿಎಂ ತೀರ್ಮಾನಿಸುತ್ತಾರೆ ಎಂದು ಆಂಜನೇಯ ಹೇಳಿದ್ದಾರೆ.

loader