ಒಂದು ಕಡೆ ದಲಿತ ವಿರೋಧಿ ಹಣೆಪಟ್ಟಿ; ಇನ್ನೊಂದು ಕಡೆ ದಲಿತರ ಮನೆಯಲ್ಲೇ ಊಟ!

First Published 15, Feb 2018, 12:12 PM IST
Minister Ananth Kumar Hegde had a lunch in Dalita House
Highlights

ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಬುಧವಾರ ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ದಲಿತರ ಮನೆಯಲ್ಲಿ ಭೋಜನ ಸ್ವೀಕರಿಸಿದರು. 

ಬೆಂಗಳೂರು (ಫೆ.15): ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ಅನಂತಕುಮಾರ್ ಹೆಗಡೆ ಬುಧವಾರ ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ದಲಿತರ ಮನೆಯಲ್ಲಿ ಭೋಜನ ಸ್ವೀಕರಿಸಿದರು.

ಮುಂಡಗೋಡ ಪಟ್ಟಣಕ್ಕೆ ಜನೌಷಧಿ ಕೇಂದ್ರ ಉದ್ಘಾಟಿಸಲು ಆಗಮಿಸಿದ್ದ ಅವರು, ಮೊದಲು ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಡಾ.ಅಂಬೇಡ್ಕರ್ ಅವರ ಬಗ್ಗೆ ತಮಗೆ ಅಪಾರವಾದ ಗೌರವ ಇದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. ಬಳಿಕ ಇಲ್ಲಿನ ಅಂಬೇಡ್ಕರ ಓಣಿಯಲ್ಲಿರುವ ಗಣಪತಿ  ದೇವರಮನಿ ಹಾಗೂ ಪ್ರಕಾಶ ದೇವರಮನಿ ಅವರ ಮನೆಯಲ್ಲಿ ತರಕಾರಿ ಪಲ್ಲೆ, ರೊಟ್ಟಿ, ಸಿಹಿ ತಿನಿಸು ತಿನ್ನುವ ಮೂಲಕ ಭರ್ಜರಿ  ಭೋಜನ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್, ಸಂಸದೆ ಶೋಭಾ ಕರಂದ್ಲಾಜೆ ಸೇರಿ ಬಿಜೆಪಿ ಪ್ರಮುಖ ನಾಯಕರು ಎರಡು ದಿನಗಳ ಹಿಂದೇ ಸ್ಲಂಗಳಲ್ಲಿ ವಾಸ್ತವ್ಯ ಮಾಡಿದ್ದರು

loader