Asianet Suvarna News Asianet Suvarna News

ವ್ಯಕ್ತಿಯೊಬ್ಬರ ಹೆಸರಲ್ಲಿದೆ ಮಿನಿ ವಿಧಾನಸೌಧ

ಕಟ್ಟಡ 6 ತಿಂಗಳ ಹಿಂದೆಯೇ ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ, ಭೂ ಮಾಲೀಕನಿಗೆ ಮಾತ್ರ ಈವರೆಗೆ ಪರಿಹಾರ ಸಿಕ್ಕಿಲ್ಲ. ಪರಿಹಾರಕ್ಕಾಗಿ 2012­ ರಿಂದ ಇಲ್ಲಿಯ­ವರೆಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯ­ದರ್ಶಿ, ಕಂದಾಯ ಸಚಿವರಿಗೆ, ಜಿಲ್ಲಾಧಿ­ಕಾರಿಗೆ ಮನವಿ ಸಲ್ಲಿಸಿದರೂ ಮಾಲೀನಿಗೆ ಪರಿ­​ಹಾರ ಸಿಕ್ಕಿಲ್ಲ.

Mini Vidhanasoudha is my property

-ಶಂಕರಬಾಬು ರೆಡ್ಡಿ
ಯಾದಗಿರಿ(ಅ.25): ರಾಜ್ಯದ ನೂತನ ಜಿಲ್ಲೆ​ಯಾಗಿ 2009ರಲ್ಲಿ ಉದ​ಯ​ವಾದ ಯಾದ​ಗಿರಿಗೆ ಮಿನಿ ವಿಧಾ​ನ​ಸೌ​ಧವೂ ಮಂಜೂ​ರಾ​ಯಿತು, ಭೂಮಿ ಸ್ವಾಧೀನಪಡಿ​ಸಿ​ಕೊಂಡು ಸೌಧ ನಿರ್ಮಾ​ಣವನ್ನೂ ಮಾಡ​ಲಾ​ಯಿ​ತು. ಆದರೆ, ಭೂಮಿ​ಯನ್ನು ಖಾಸಗಿ ವ್ಯಕ್ತಿಯ ಹೆಸ​ರಿ​ನಿಂದ ಈ ವರೆಗೆ ಜಿಲ್ಲಾ​ಡ​ಳಿ​ತದ ಹೆಸ​ರಿಗೆ ವರ್ಗಾ​ವ​ಣೆಯನ್ನೇ ಮಾಡಿಲ್ಲ. ಭೂ ಮಾಲೀ​ಕ​ನಿಗೆ ಪರಿ​ಹಾ​ರ​ವನ್ನೂ ನೀಡಿಲ್ಲ. ಹೀಗಾಗಿ ಮಾಲೀ​ಕ​ ತನಗೆ ಪರಿ​ಹಾರ ನೀಡಿ, ಆನಂತರ ಸೌಧದ ಉದ್ಘಾ​ಟನೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. 
ಹೌದು, ಇದು ಯಾದಗಿರಿ ನಗರದಲ್ಲಿ ತಲೆಎತ್ತಿ ನಿಂತಿರುವ ಮಿನಿ ವಿಧಾನಸೌಧದ ಕತೆ. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಸರ್ಕಾರ 2011ರಲ್ಲಿ ನಗರದ ಚಿತ್ತಾಪುರ ರಸ್ತೆಯಲ್ಲಿರುವ ನಜಮುದ್ದೀನ್‌ ಅಬ್ದುಲ್‌ ಹೈ ಎಂಬು​ವ​ವ​ರಿಗೆ ಸೇರಿದ 2 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಂಡಿತು. ಇದಕ್ಕೆ ಪರಿಹಾರವಾಗಿ .36,94,197 ನಿಗದಿ ಮಾಡಿತ್ತು. ನಂತರ ಆ ಜಾಗದಲ್ಲಿ .45 ಲಕ್ಷ ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಿಸಲಾ​ಯಿತು. ಈ ಕಟ್ಟಡ 6 ತಿಂಗಳ ಹಿಂದೆಯೇ ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ, ಭೂ ಮಾಲೀಕನಿಗೆ ಮಾತ್ರ ಈವರೆಗೆ ಪರಿಹಾರ ಸಿಕ್ಕಿ​ಲ್ಲ. ಪರಿಹಾರಕ್ಕಾಗಿ 2012­ ರಿಂದ ಇಲ್ಲಿಯ­ವರೆಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯ­ದರ್ಶಿ, ಕಂದಾಯ ಸಚಿವರಿಗೆ, ಜಿಲ್ಲಾಧಿ­ಕಾರಿಗೆ ಮನವಿ ಸಲ್ಲಿಸಿದರೂ ಮಾಲೀ​ಕ​ನಿಗೆ ಪರಿ­​ಹಾರ ಸಿಕ್ಕಿಲ್ಲ. ಅಲ್ಲದೆ, ಭೂಮಿ​ಯನ್ನು ಜಿಲ್ಲಾ​ಡ​ಳಿತ ತನ್ನ ಹೆಸ​ರಿಗೆ ವರ್ಗಾ​ಯಿ​ಸಿ​ಕೊಂಡಿಲ್ಲ. ಹೀಗಾಗಿ ​ಸೌಧ ನಿವೇ​ಶನ ಮಾಲೀ​ಕನ ಹೆಸ​ರಲ್ಲೇ ಇದೆ. 

Follow Us:
Download App:
  • android
  • ios