Asianet Suvarna News Asianet Suvarna News

ಆನ್'ಲೈನ್'ನಲ್ಲಿ ಬುಕ್ ಮಾಡಿದ್ರೆ ಹಾಲು ಮನೆಗೆ ಬರುತ್ತದೆ

ಈ ತಂತ್ರಜ್ಞಾನದಿಂದ ಮಹಿಳಾ ಕಾರ್ಮಿಕರು, ವಯೋವೃದ್ಧರು, ದುಡಿಯುವ ವರ್ಗಕ್ಕೆ ಪ್ರಯೋಜನವಾಗಲಿದೆ. ಸಮಾರಂಭಗಳು, ಕ್ಯಾಂಟೀನ್, ಹೋಟೆಲ್ ಉದ್ಯಮಗಳು, ಎಮ್‌ಎನ್‌ಸಿ ಕಂಪನಿಗಳು, ಸಾಮೂಹಿಕ ಹಾಗೂ ಸಾಂಪ್ರದಾಯಿಕ ಭೋಜನಾ ಕೂಟಗಳು, ಸಮಾಜಮುಖಿ ಕಾರ್ಯಗಳಿಗೂ ಬಹಳ ಉಪಯುಕ್ತವಾಗಿದೆ ಎಂದು ಸಂಸ್ಥೆ ತಿಳಿಸಿದೆ.

Milk now online market
  • Facebook
  • Twitter
  • Whatsapp

ಬೆಂಗಳೂರು(ಏ.05): ಕರ್ನಾಟಕ ಹಾಲು ಮಹಾಮಂಡಲಿ (ಕೆಎಂಎಫ್) ಡಿಜಿಟಲ್ ಇಂಡಿಯಾ ಅಭಿಯಾನದ ಅಂಗವಾಗಿ ಗ್ರಾಹಕರಿಗೆ ಅನುಕೂಲ ಕಲ್ಪಿಸಲು ನವೀನ ತಂತ್ರಜ್ಞಾನ ‘ಈ ಡೇರಿ’ ಅಳವಡಿಸಿಕೊಳ್ಳಲು ಮುಂದಾಗಿದೆ.

ಈ ನೂತನ ವ್ಯವಸ್ಥೆಯಿಂದ ಗ್ರಾಹಕರು ತಮ್ಮ ಮನೆಯಂಗಳಕ್ಕೆ ನಂದಿನಿ ಹಾಲಿನ ಉತ್ಪನ್ನಗಳನ್ನು ಯಾವುದೇ ಸಮಯದಲ್ಲಾದರೂ, ಯಾವುದೇ ಸ್ಥಳಕ್ಕಾದರೂ ಆರ್ಡರ್ ಮಾಡಿ ತರಿಸಿಕೊಳ್ಳಬಹುದು. ಗ್ರಾಹಕರು ಆರ್ಡರ್ ಮಾಡಿರುವ ಉತ್ಪನ್ನಗಳನ್ನು ಕೆಎಂಎಫ್'ನ ನಿಯೋಜಿತ ಸ್ಟಾಕ್ ಪಾಯಿಂಟ್‌ಗಳಿಂದ ವಿತರಿಸಲಾಗುತ್ತದೆ. ಉತ್ಪನ್ನಗಳನ್ನು ಇ ಕಾಮರ್ಸ್‌ನ ಆನ್‌ಲೈನ್ ಈ ಡೇರಿ ಮುಖಾಂತರವೇ ತಲುಪಿಸಲಾಗುತ್ತದೆ.

ಈ ತಂತ್ರಜ್ಞಾನದಿಂದ ಮಹಿಳಾ ಕಾರ್ಮಿಕರು, ವಯೋವೃದ್ಧರು, ದುಡಿಯುವ ವರ್ಗಕ್ಕೆ ಪ್ರಯೋಜನವಾಗಲಿದೆ. ಸಮಾರಂಭಗಳು, ಕ್ಯಾಂಟೀನ್, ಹೋಟೆಲ್ ಉದ್ಯಮಗಳು, ಎಮ್‌ಎನ್‌ಸಿ ಕಂಪನಿಗಳು, ಸಾಮೂಹಿಕ ಹಾಗೂ ಸಾಂಪ್ರದಾಯಿಕ ಭೋಜನಾ ಕೂಟಗಳು, ಸಮಾಜಮುಖಿ ಕಾರ್ಯಗಳಿಗೂ ಬಹಳ ಉಪಯುಕ್ತವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಮೊಬೈಲ್, ಕಂಪ್ಯೂಟರ್, ಟ್ಯಾಬ್,ಫೇಸ್‌ಬುಕ್, ಟ್ವಿಟರ್, ಲಿಂಕ್‌ಡಿನ್, ಗೂಗಲ್ ಪ್ಲಸ್, ಯೂಟ್ಯೂಬ್‌ಗಳ ಮುಖಾಂತರವೂ ಈ ಡೇರಿಯನ್ನು ನೇರವಾಗಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ ಟೋಲ್ ರಹಿತ ನಂಬರ್ 1800-103-9073 ಹಾಗೂ ಸಹಾಯವಾಣಿ 080-42507100 ಅಥವಾ ಕೆಎಮ್'ಎಫ್ ವೆಬ್'ಸೈಟ್ ಅನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

Follow Us:
Download App:
  • android
  • ios