ಉತ್ತರ ಕೊರಿಯಾದ ಮೇಲೆ ‘ಸೇನಾ ವಿಕಲ್ಪ’ಕ್ಕೂ ನಾವು ಸಿದ್ಧರಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಎಲ್ಲ ಸಮಾನ ಮನಸ್ಕ ದೇಶಗಳು ಈ ವಿಷಯದಲ್ಲಿ ಕೈಜೋಡಿಸಿ ಉತ್ತರ ಕೊರಿಯಾವನ್ನು ಏಕಾಂಗಿಗೊಳಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ವಾಷಿಂಗ್ಟನ್(ಸೆ.28): ಉತ್ತರ ಕೊರಿಯಾದ ಮೇಲೆ ‘ಸೇನಾ ವಿಕಲ್ಪ’ಕ್ಕೂ ನಾವು ಸಿದ್ಧರಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಎಲ್ಲ ಸಮಾನ ಮನಸ್ಕ ದೇಶಗಳು ಈ ವಿಷಯದಲ್ಲಿ ಕೈಜೋಡಿಸಿ ಉತ್ತರ ಕೊರಿಯಾವನ್ನು ಏಕಾಂಗಿಗೊಳಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಅಮೆರಿಕದ ಬಾಂಬರ್‌'ಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ ಎಂದು ಉತ್ತರ ಕೊರಿಯಾ ವಿದೇಶಾಂಗ ಸಚಿವರು 2 ದಿವಸಗಳ ಹಿಂದೆ ಹೇಳಿದ್ದರು. ಇದರ ಬೆನ್ನಲ್ಲೇ ಟ್ರಂಪ್ ಅವರ ಈ ಉತ್ತರ ಬಂದಿದೆ.

‘ನಮ್ಮ ಮುಂದೆ ಎರಡು ಆಯ್ಕೆಗಳು (ವಿಕಲ್ಪಗಳು) ಇವೆ. ಅದರಲ್ಲಿ ಎರಡನೇ ಆಯ್ಕೆಗೆ (ಸೇನಾ ಕಾರ್ಯಾರಚಣೆ) ಕೂಡ ನಾವು ಸಿದ್ಧರಿದ್ದೇವೆ. ಆದರೆ ಇದು ಮೊದಲ ಆಯ್ಕೆಯಂತೂ ಅಲ್ಲ. ಈ ಆಯ್ಕೆಯನ್ನು ನಾವು ಆಯ್ದುಕೊಂಡಿದ್ದೇ ಆದಲ್ಲಿ ಅದು ಉತ್ತರ ಕೊರಿಯಾ ಪಾಲಿಗೆ ವಿನಾಶಕಾರಿಯಾಗುತ್ತದೆ. ಅನಿವಾರ್ಯ ಎಂದಾದಲ್ಲಿ ಆ ಆಯ್ಕೆಯನ್ನು ನಾವು ಆಯ್ದುಕೊಳ್ಳಲೇಬೇಕಾಗುತ್ತದೆ’ ಎಂದು ಸ್ಪೇನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಟ್ರಂಪ್ ಹೇಳಿದರು.