ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರಿದಿದೆ. ಸೇನಾ ಪಡೆಗಳಲ್ಲಿ ಸ್ವಯಂಪ್ರೇರಿತ ಯೋಧ (ಟೆರಿಟೋರಿಯಲ್ ಆರ್ಮಿ ಜವಾನ್)ನಾಗಿ ಸೇವೆ ಸಲ್ಲಿಸುತ್ತಿದ್ದ ಯುವಕನೊಬ್ಬನನ್ನು ಅಪಹರಿಸಿರುವ ಉಗ್ರರು, ಆತನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಶ್ರೀನಗರ: ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರಿದಿದೆ. ಸೇನಾ ಪಡೆಗಳಲ್ಲಿ ಸ್ವಯಂಪ್ರೇರಿತ ಯೋಧ (ಟೆರಿಟೋರಿಯಲ್ ಆರ್ಮಿ ಜವಾನ್)ನಾಗಿ ಸೇವೆ ಸಲ್ಲಿಸುತ್ತಿದ್ದ ಯುವಕನೊಬ್ಬನನ್ನು ಅಪಹರಿಸಿರುವ ಉಗ್ರರು, ಆತನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಶೋಪಿಯಾನ್ ಜಿಲ್ಲೆಯಲ್ಲಿ ಆತನ ಶವ ಶನಿವಾರ ಪತ್ತೆಯಾಗಿದೆ. ದೇಹದ ತುಂಬೆಲ್ಲಾ ಗುಂಡು ಹೊಕ್ಕಿದ್ದು, ಆತನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಇರ್ಫಾನ್ ಅಹಮದ್ ಉಗ್ರರ ಅಟ್ಟಹಾಸಕ್ಕೆ ಬಲಿಯಾದ ಯುವಕ. ವಾತ್ಮುಲ್ಲಾ ಕೀಗಂ ಪ್ರದೇಶದಲ್ಲಿರುವ ಹಣ್ಣಿನ ತೋಟವೊಂದರಲ್ಲಿ ಈತನ ದೇಹ ಪತ್ತೆಯಾಗಿದೆ.