ಟಿವಿ ಟವರ್​ ಗೆ ಕಾವಲಾಗಿದ್ದ ಪೊಲೀಸರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಪೊಲೀಸರ ಬಳಿ ಇದ್ದ 5 ಬಂದೂಕುಗಳನ್ನು ಉಗ್ರರು ಕಸಿದುಕೊಂಡು ಹೋಗಿದ್ದಾರೆ

ಶ್ರೀನಗರ (ಅ.17): ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ ಮುಂದುವರೆದಿದೆ. ಉಗ್ರರು ಪೊಲೀಸರಿಂದ ಶಸ್ತ್ರಾಸ್ತ್ರ ಕಸಿದು ಪರಾರಿಯಾಗಿರುವ ಘಟನೆ ಅನಂತ್​ನಾಗ್​ ಜಿಲ್ಲೆಯಲ್ಲಿ ನಡೆದಿದೆ.

ಟಿವಿ ಟವರ್​ ಗೆ ಕಾವಲಾಗಿದ್ದ ಪೊಲೀಸರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಪೊಲೀಸರ ಬಳಿ ಇದ್ದ 5 ಬಂದೂಕುಗಳನ್ನು ಉಗ್ರರು ಕಸಿದುಕೊಂಡು ಹೋಗಿದ್ದಾರೆ.

ಸೇನಾ ಸಮವಸ್ತ್ರದಲ್ಲಿ ಪ್ರತ್ಯಕ್ಷರಾದ ಉಗ್ರರು ಪೊಲೀಸರ ಮೇಲೆ ದಾಳಿ ನಡೆಸಿದರೆನ್ನಲಾಗಿದೆ.