ಇಂದು ಮುಂಜಾನೆ 4.30ರ ಸುಮಾರಿಗೆ ದೆಹಲಿ, ಗುರಗಾಂವ್ ಮತ್ತು ಘಾಜಿಯಾಬಾದ್, ಹರಿಯಾಣ, ರಾಜಸ್ಥಾನ ನಡುವಿನ ಗಡಿ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ.
ದೆಹಲಿ(ನ.17): ಇಂದು ಬೆಳಗ್ಗೆ ರಾಷ್ಟ್ರದ ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಲಘು ಭೂಕಂಪ ಸಂಭವಿಸಿದೆ. ಇದರಿಂದಾಗಿ ಜನ ಗಾಬರಿಗೊಂಡು ಮನೆಯಿಂದ ಹೊರ ಬಂದಿದ್ದಾರೆ.
ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆ ದಾಖಲಾಗಿದ್ದು, ಭೂಮಿಯಿಂದ 10 ಕಿ.ಮೀ. ಆಳದಲ್ಲಿ ಭೂಮಿ ಕಂಪಿಸಿದೆ. ಇಂದು ಮುಂಜಾನೆ 4.30ರ ಸುಮಾರಿಗೆ ದೆಹಲಿ, ಗುರಗಾಂವ್ ಮತ್ತು ಘಾಜಿಯಾಬಾದ್, ಹರಿಯಾಣ, ರಾಜಸ್ಥಾನ ನಡುವಿನ ಗಡಿ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ.
ಭೂಕಂಪ ಕೇಂದ್ರ ಬಿಂದು ಹರಿಯಾಣದ ರೆವಾಡಿ ಜಿಲ್ಲೆಯ ಬಾವ್ಲಾದಲ್ಲಿ ದಾಖಲಾಗಿದೆ. ಈ ಪ್ರದೇಶ ದೆಹಲಿಯಿಂದ ಸುಮಾರು 100 ಕಿಮೀ ದೂರದಲ್ಲಿದೆ. ಭೂಕಂಪನದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎನ್ನಲಾಗ್ತಿದೆ. ಎಲ್ಲರೂ ನಿದ್ದೆಗೆ ಜಾರಿದ್ದರಿಂದ ಬಹಳಷ್ಟು ಜನರಿಗೆ ಭೂಕಂಪದ ಅನುಭವವಾಗಿಲ್ಲ ಎಂದು ತಿಳಿದು ಬಂದಿದೆ.
