Asianet Suvarna News Asianet Suvarna News

ಬೆಂಗಳೂರು ಸುತ್ತಮುತ್ತ ಭೂಕಂಪ; ಕತ್ರಿಗುಪ್ತೆ, ಮಲ್ಲೇಶ್ವರ ಮೊದಲಾದೆಡೆ ಕಂಪನದ ಅನುಭವ

ಬೆಂಗಳೂರು ಹೊರವಲಯದ ನೆಲಮಂಗಲದ ಕೆಲ ಭಾಗಗಳಲ್ಲಿ ಭೂಕಂಪನವಾಗಿದೆ. ಸೋಲದೇವನಹಳ್ಳಿಯಲ್ಲಿರುವ ತಮ್ಮ ಫಾರ್ಮ್'ಹೌಸ್'ನಲ್ಲಿ ಕಂಪನದ ಅನುಭವವಾಯಿತು ಎಂದು ನಟ ವಿನೋದ್'ರಾಜ್ ಮತ್ತು ಲೀಲಾವತಿ ಸ್ಪಷ್ಟಪಡಿಸಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಕೂಡ ತಮ್ಮ ಮನೆ ನಡುಗಿತೆಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

mild earthquake felt in and around bangalore
  • Facebook
  • Twitter
  • Whatsapp

ಬೆಂಗಳೂರು(ಏ. 18): ಮೊನ್ನೆಮೊನ್ನೆ ಮೈಸೂರಿನಲ್ಲಿ ಭೂಮಿಯೊಳಗೆ ಬೆಂಕಿಕಾಣಿಸಿಕೊಂಡ ಬೆನ್ನಲ್ಲೇ ಈಗ ಮಂಗಳವಾರ ಬೆಳಗ್ಗೆ ಮೈಸೂರು ಸೀಮೆ ಪ್ರದೇಶದ ಹಲವೆಡೆ ಭೂಕಂಪನವಾಗಿದೆ. ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರಿನ ಹಲವು ಭಾಗಗಳಲ್ಲಿ ಕಂಪನದ ಅನುಭವವಾಗಿದೆ.

ಸಿಲಿಕಾನ್ ಸಿಟಿಯ ಕೆಲ ಭಾಗಗಳಲ್ಲಿ ಭೂಮಿ ಕಂಪಿಸಿರುವ ಅನುಭವವಾಗಿದೆ. ಯಲಹಂಕ ನ್ಯೂಟೌನ್, ಮಲ್ಲೇಶ್ವರ, ಹನುಮಂತನಗರ, ಶ್ರೀನಗರ, ಕತ್ರಿಗುಪ್ತೆ, ರಾಜರಾಜೇಶ್ವರಿನಗರ, ಕೆಂಗೇರಿ ಪ್ರದೇಶಗಳಲ್ಲಿ ಲಭು ಭೂಂಕಪನವಾಗಿದೆ. 2-3 ಸೆಕೆಂಡ್'ಗಳ ಕಾಲ ಕಂಪನದ ಅನುಭವವಾಗಿದೆ. ಭೂಮಿ ನಡುಗಿದ್ದರಿಂದ ವಿಚಲಿತಗೊಂಡ ಜನರು ಮನೆಯಿಂದ ಹೊರಗೆ ಓಡಿ ಬಂದದ್ದು ವರದಿಯಾಗಿದೆ. ಆದರೆ, ತಮಗೆ ಕಂಪನದ ಅನುಭವವೇ ಆಗಿಲ್ಲ ಎಂದು ಭೂಕಂಪನವಾದ ಪ್ರದೇಶಗಳ ಹಲವು ಜನರು ಹೇಳಿದ್ದಾರೆ.

ಬೆಂಗಳೂರು ಹೊರವಲಯದ ನೆಲಮಂಗಲದ ಕೆಲ ಭಾಗಗಳಲ್ಲಿ ಭೂಕಂಪನವಾಗಿದೆ. ಸೋಲದೇವನಹಳ್ಳಿಯಲ್ಲಿರುವ ತಮ್ಮ ಫಾರ್ಮ್'ಹೌಸ್'ನಲ್ಲಿ ಕಂಪನದ ಅನುಭವವಾಯಿತು ಎಂದು ನಟ ವಿನೋದ್'ರಾಜ್ ಮತ್ತು ಲೀಲಾವತಿ ಸ್ಪಷ್ಟಪಡಿಸಿದ್ದಾರೆ. ನಟಿ ರಕ್ಷಿತಾ ಪ್ರೇಮ್ ಕೂಡ ತಮ್ಮ ಮನೆ ನಡುಗಿತೆಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಒಕ್ಕರಹಳ್ಳಿ, ನಾಗೇಗೌಡನದೊಡ್ಡಿ ಸುತ್ತಮುತ್ತಲ ಗ್ರಾಮಗಳಲ್ಲಿ ಭೂಕಂಪನವಾಗಿದ್ದು ಜನರು ಭಯಭೀತಗೊಂಡು ಹೊರಗೆ ಓಡಿಬಂದ ಘಟನೆ ವರದಿಯಾಗಿದೆ. ರಾಮನಗರ ಜಿಲ್ಲೆಯಲ್ಲಿ ಬೆಳಗ್ಗೆ 7:37 ರ ಸಮಯದಲ್ಲಿ ಭೂಕಂಪವಾಗಿದೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಸತ್ತೆಗಾಲ, ರಾಮನಗರ ಮೊದಲಾದ ಗ್ರಾಮಗಳಲ್ಲೂ ಕಂಪನವಾಗಿದೆ. ಅನೇಕ ಕಡೆ 10 ಸೆಕೆಂಡ್'ಗಳವರೆಗೂ ಕಂಪನವಾಗಿತ್ತೆನ್ನಲಾಗಿದೆ.

Follow Us:
Download App:
  • android
  • ios