ಕಂಪನಿಯೊಂದು ತನ್ನ ನೌಕರರಿಗೆ ಬಂಪರ್ ಬೋನಸ್ ನೀಡಿದೆ. ಅಮೆರಿಕದ ಕಂಪನಿಯೊಂದು ತನ್ನ ಪ್ರತಿಯೊಬ್ಬ ನೌಕರರಿಗೂ ತಲಾ 14 ಲಕ್ಷ ರು. ಅನ್ನು ಕ್ರಿಸ್‌ಮಸ್‌ ಬೋನಸ್‌ ಆಗಿ ಕೊಟ್ಟಿದೆ.

ಮಿಚಿಗನ್ :  ನೌಕರರಿಗೆ ಸಾಮಾನ್ಯವಾಗಿ 1 ತಿಂಗಳ ವೇತನವನ್ನು ಬೋನಸ್‌ ಆಗಿ ನೀಡಲಾಗುತ್ತೆ. ಆದರೆ, ಅಮೆರಿಕದ ಕಂಪನಿಯೊಂದು ತನ್ನ ಪ್ರತಿಯೊಬ್ಬ ನೌಕರರಿಗೂ ತಲಾ 14 ಲಕ್ಷ ರು. ಅನ್ನು ಕ್ರಿಸ್‌ಮಸ್‌ ಬೋನಸ್‌ ಆಗಿ ಕೊಟ್ಟಿದೆ. ಮಿಚಿಗನ್‌ನಲ್ಲಿರುವ ಫ್ಲೋರಾಕ್ರಾಫ್ಟ್‌ ಕಂಪನಿಯು ತನ್ನ 200 ಮಂದಿ ನೌಕರರಿಗೆ ಸುಮಾರು 28 ಕೋಟಿ ರು. ಖರ್ಚು ಮಾಡಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲಿಯೋ ಶೊನ್ಹೆರ್‌, ‘ಕಂಪನಿಗಾಗಿ ಕಷ್ಟಪಟ್ಟು ದುಡಿಮೆ ಮಾಡುವ ನೌಕರರಿಗೆ ಮೆಚ್ಚುಗೆಯ ರೂಪದಲ್ಲಿ ಈ ಬೋನಸ್‌ ನೀಡಲಾಗಿದೆ. 

ಈ ಮೂಲಕ ನೌಕರರ ಕೆಲಸವನ್ನು ಕಂಪನಿಯು ಎಂದೆಂದಿಗೂ ಕಡೆಗಣಿಸುವುದಿಲ್ಲ ಎಂಬ ಸಂದೇಶವನ್ನು ನೌಕರರಿಗೆ ನೀಡಿದೆ,’ ಎಂದು ಹೇಳಿದ್ದಾರೆ. ಅಲ್ಲದೆ, ಕಂಪನಿಯಲ್ಲಿ ಕಳೆದ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ತಲಾ 42 ಲಕ್ಷ ರು. ಹಾಗೂ ಸಾಮಾನ್ಯ ವರ್ಗದ ನೌಕರರಿಗೆ ತಲಾ 14 ಲಕ್ಷ ರು. ನೀಡಲಾಗಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.