ಬೆಂಗಳೂರು(ಆ.22): ಉತ್ತರ ಕರ್ನಾಟಕದಲ್ಲಿ ತಲೆದೂರಿರುವ ಭೀಕರ ಜಲಪ್ರಳಯ ಹಾಗೂ ನಿರಂತರ ಮಳೆಯಿಂದಾಗಿ ಮನೆ, ಆಸ್ತಿ ಕಳೆದುಕೊಂಡು ನಿರಾಶ್ರಿತರಾದ ಜನರ ನೆರವಿಗೆ ಹಾಸ್ಪಿಟಾಲಿಟಿ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಷರ್‌ ಪ್ರೈವೇಟ್‌ ಲಿಮಿಟೆಡ್‌ ( MRG) ಮುಂದೆ ಬಂದಿದೆ.

ಹಾಸ್ಪಿಟಾಲಿಟಿ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಷರ್‌ ಪ್ರೈವೇಟ್‌ ಲಿಮಿಟೆಡ್‌ ( MRG) ನೆರೆ ಸಂತ್ರಸ್ತರ ನೆರವಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನೀಡಿದರು.

 ಹಾಸ್ಪಿಟಾಲಿಟಿ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಷರ್‌ ಪ್ರೈವೇಟ್‌ ಲಿಮಿಟೆಡ್‌’ನ  ಅಧ್ಯಕ್ಷ  ಕೆ ಪ್ರಕಾಶ್ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌರವ್ ಪಿ ಶೆಟ್ಟಿ ಅವರು ಇಂದು (ಗುರುವಾರ) ಖುದ್ದು ಸಿಎಂ ಅವರನ್ನು ಭೇಟಿ ಮಾಡಿ 1 ಕೋಟಿರೂ. ಚೆಕ್ ನೀಡಿದರು.
ಈ ಕುರಿತು ಮಾತನಾಡಿರುವ ಪ್ರಕಾಶ್ ಶೆಟ್ಟಿ ಸಂಕಷ್ಟದಲ್ಲಿರುವ ಕರುನಾಡಿನ ಜನತೆಗೆ ಸಕಲ ನೆರವು ನೀಡುವಲ್ಲಿ ಸಂಸ್ಥೆ ರಾಜ್ಯ ಸರ್ಕಾರದೊಂದಿಗೆ ಹೆಗಲು ಕೊಟ್ಟು ನಿಲ್ಲಲಿದೆ ಎಂದು ಹೇಳಿದ್ದಾರೆ.

ನಿರಾಶ್ರಿತರಿಗೆ ಶೀಘ್ರದಲ್ಲೇ ಮನೆಗಳ ನಿರ್ಮಾಣವೂ ಸೇರಿದಂತೆ ಎಲ್ಲ ಅಗತ್ಯ ನೆರವು ನೀಡಲು ಸಂಸ್ಥೆ ಬದ್ಧವಾಗಿದೆ ಎಂದು ಪ್ರಕಾಶ್ ಶೆಟ್ಟಿ ಭರವಸೆ ನೀಡಿದ್ದಾರೆ.