ಮೈಸೂರು(ಸೆ.20): ಒಂದು ಕಡೆ ಕರ್ನಾಟಕದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದ್ದರೂ ಕಾವೇರಿ ಬೇಕೆ ಬೇಕು ಎಂದು ಹಠ ಮಾಡುತ್ತಿರುವ ತಮಿಳುನಾಡು ಸರಕಾರ ತನ್ನ ರೈತರ ಬೆಳೆಗಳಿಗೆ ನೀರು ಬಿಟ್ಟಿದೆ. 

ಮೆಟ್ಟರೂ ಜಲಾಶಯಕ್ಕೆ ಬಾಗಿನ ಅರ್ಪಿಸಿದ ತಮಿಳುನಾಡಿನ ಸಚಿವರು ರಾಜ್ಯದ ರೈತರ ಬೆಳೆಗಳಿಗೆ ನೀರು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಅವರಿಗೆ ನೀರು, ನಮಗೆ ಕಣ್ಣೀರು ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಆರ್​ಎಸ್, ಕಬಿನಿಯಿಂದ ಮೆಟ್ಟೂರು ಸೇರಿದ ಕಾವೇರಿ, ಅಲ್ಲಿನ ಬೆಳೆಗಳಿಗೆ ಜೀವ ನೀಡುತ್ತಿದ್ದರೆ ಕಾವೇರಿ ಕೊಳ್ಳದ ಬೆಳೆಗಳು ನೀರಿಲ್ಲದೇ ಒಣಗುತ್ತಿವೆ. ಕೆಆರ್​​ಎಸ್​​ನಲ್ಲಿ ನೀರಿನ ಮಟ್ಟ ಕುಸಿಯುತ್ತಿದೆ.