Asianet Suvarna News Asianet Suvarna News

ಐಪಿಎಲ್ ಹಿನ್ನೆಲೆ : ,ಮೆಟ್ರೋ ಸಂಚಾರ ಅವಧಿ ವಿಸ್ತರಣೆ

ಬೆಂಗಳೂರಿನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ತಡರಾತ್ರಿ 12.30ರವರೆಗೆ ಬೆಂಗಳೂರು ಮೆಟ್ರೊ ರೈಲ್ ನಿಗಮ(ಬಿಎಂಆರ್‌ಸಿಎಲ್) ಅವಧಿ ವಿಸ್ತರಿಸಿದೆ.

Metro Time Extend

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿ ಹಿನ್ನೆಲೆಯಲ್ಲಿ ತಡರಾತ್ರಿ 12.30ರವರೆಗೆ ಬೆಂಗಳೂರು ಮೆಟ್ರೊ ರೈಲ್ ನಿಗಮ(ಬಿಎಂಆರ್‌ಸಿಎಲ್) ಅವಧಿ ವಿಸ್ತರಿಸಿದೆ.

ಐಪಿಎಲ್ ಕ್ರಿಕೆಟ್ ಪಂದ್ಯ ನಡೆಯಲಿರುವ ಏ.13, 21, 25, 29 ಹಾಗೂ ಮೇ 1 ಮತ್ತು 17ರಂದು ಮೆಟ್ರೊ ರೈಲು ರಾತ್ರಿ 11ರ ಬದಲಿಗೆ ತಡರಾತ್ರಿ 12.30ರವರೆಗೆ ಸಂಚಾರ ಸೇವೆ ನೀಡಲಿದೆ. ರಾತ್ರಿ 11ರ ನಂತರ ಪ್ರತಿ 15 ನಿಮಿಷಗಳ ಅವಧಿಯಲ್ಲಿ ಮೆಟ್ರೊ ರೈಲ್ ಮೈಸೂರು ರಸ್ತೆ ಮೆಟ್ರೊ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣ ಹಾಗೂ ಯಲಚೇನಹಳ್ಳಿಯಿಂದ ನಾಗಸಂದ್ರ ಮೆಟ್ರೊ ನಿಲ್ದಾನದವರೆಗೆ ಸಂಚರಿಸಲಿದೆ. ಕೊನೆಯ ವಾಣಿಜ್ಯ ರೈಲು ಸಂಚಾರವು ಕಬ್ಬನ್‌ಪಾರ್ಕ್ ಮೆಟ್ರೊ ರೈಲು ನಿಲ್ದಾಣದಿಂದ ಮೈಸೂರು ರಸ್ತೆ ಮೆಟ್ರೊ ರೈಲು ನಿಲ್ದಾಣದ ಕಡೆಗೆ ಹೊರಡಲಿದೆ. ಇದು ನಾಗಸಂದ್ರ ಮತ್ತು ಯಲಚೇನಹಳ್ಳಿ ಮೆಟ್ರೊ ರೈಲು ನಿಲ್ದಾಣಗಳ ಕಡೆಗೆ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಲ್ಲಿ ಸಂಪರ್ಕ ಕಲ್ಪಿಸಲಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರಜೈನ್ ತಿಳಿಸಿದ್ದಾರೆ.

ಕ್ರಿಕೆಟ್ ಪಂದ್ಯಾವಳಿ ಮುಗಿದ ನಂತರ ಕಬ್ಬನ್‌ಪಾರ್ಕ್ ಮತ್ತು ಮಹಾತ್ಮಗಾಂಧಿ ರಸ್ತೆ ಮೆಟ್ರೊ ರೈಲು ನಿಲ್ದಾಣಗಳಿಂದ ಪ್ರಯಾಣಿಕರು ತ್ವರಿತವಾಗಿ ಪ್ರಯಾಣಿಸಲು ಅನುಕೂಲ ವಾಗುವಂತೆ ರಿರ್ಟನ್ ಜರ್ನಿ ಪೇಪರ್ ಟಿಕೆಟುಗಳನ್ನು ಯಾವುದೇ ಮೆಟ್ರೊ ನಿಲ್ದಾಣಗಳಿಂದ ಖರೀದಿಸಬಹುದು.

ಪ್ರತಿ ದಿನ ಪಂದ್ಯಾವಳಿಯ ನಂತರ ಕೊನೆಯ ಮೆಟ್ರೊ ರೈಲು ಸೇವೆಯವರೆಗೆ ಈ ಟಿಕೇಟನ್ನು ಮಾನ್ಯ ಮಾಡಲಾಗುವುದು. ಪ್ರತಿ ಟಿಕೇಟ್ ನ ಬೆಲೆಯು 50 ರು. ನಿಗದಿಪಡಿಸಲಾಗಿದೆ. ಈ ಟಿಕೇಟನ್ನು ಕಬ್ಬನ್‌ಪಾರ್ಕ್ ಮತ್ತು ಮಹಾತ್ಮಗಾಂಧಿ ರಸ್ತೆ ನಿಲ್ದಾಣಗಳಿಂದ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿನ ಯಾವುದೇ ನಿಲ್ದಾಣಗಳಿಗೆ ಪ್ರಯಾಣಿಸಲು ಉಪಯೋಗಿಸಬಹುದು. ಈ ಸಮನಾಂತರ ದರದಿಂದ ಪಂದ್ಯಾವಳಿಯ ನಂತರ ಬರುವ ಜನ ದಟ್ಟಣೆಯನ್ನು ತಪ್ಪಿಸಲು ಮತ್ತು ಚಿಲ್ಲರೆ ಕೊರತೆ ನೀಗಿಸಲು ಅನುಕೂಲಕರವಾಗಿದೆ.

Follow Us:
Download App:
  • android
  • ios