ಮಾ. 22 ರಂದು ಮೆಟ್ರೋ ಸಂಚಾರ ಇರುತ್ತಾ? ಮುಷ್ಕರ ನಡೆಯುತ್ತಾ?

Metro Strike on March 22
Highlights

ಮೆಟ್ರೋ ನೌಕರರ ವಿರುದ್ಧ ಎಸ್ಮಾ ಜಾರಿ ತಡೆಯಾಜ್ಞೆ ತೆರವು ಕೋರಿ ಬಿಎಂಆರ್’ಸಿಎಲ್  ಮಧ್ಯಂತರ ಅರ್ಜಿ ಸಲ್ಲಿಸಿದೆ.

ಬೆಂಗಳೂರು (ಮಾ. 20): ಮೆಟ್ರೋ ನೌಕರರ ವಿರುದ್ಧ ಎಸ್ಮಾ ಜಾರಿ ತಡೆಯಾಜ್ಞೆ ತೆರವು ಕೋರಿ ಬಿಎಂಆರ್’ಸಿಎಲ್  ಮಧ್ಯಂತರ ಅರ್ಜಿ ಸಲ್ಲಿಸಿದೆ.

ಮೆಟ್ರೋ ನೌಕರರು ಮುಷ್ಕರ ಮಾಡಲು‌ ಮುಂದಾಗಿದ್ದಾರೆ. ಎಸ್ಮಾ ಕಾಯ್ದೆಯ ಅಧೀನಕ್ಕೆ ಮೆಟ್ರೋ ಸಿಬ್ಬಂದಿಯನ್ನು ತರಲಾಗಿದೆ. ಸರ್ಕಾರ ಈ‌ ಕುರಿತು ಅಧಿಸೂಚನೆ ಹೊರಡಿಸಿದೆ. ಹೀಗಾಗಿ ಎಸ್ಮಾ ಜಾರಿಗೆ ನೀಡಿರುವ ತಡೆಯಾಜ್ಞೆ ತೆರವಿಗೆ ಬಿಎಂಆರ್’ಸಿಎಲ್ ವಕೀಲರು ಹೈಕೋರ್ಟ್ ’ನಲ್ಲಿ  ಮನವಿ ಸಲ್ಲಿಸಿದ್ದಾರೆ.

ಸರ್ಕಾರ ಪರ ಎಎಜಿ ಪೊನ್ನಪ್ಪ ವಾದ ಮಂಡನೆ ಮಾಡಿದ್ದಾರೆ. ಮೆಟ್ರೋ ಸಿಬ್ಬಂದಿ ಮುಷ್ಕರ ಬೆದರಿಕೆ ಒಡ್ಡಿ ಮಾತುಕತೆ ನಡೆಸುತ್ತಿರುವುದು ಸರಿಯಲ್ಲ. ಪ್ರತಿದಿನ ನಾಲ್ಕು ಲಕ್ಷ ಸಾರ್ವಜನಿಕರು ಮೆಟ್ರೋ ಅವಲಂಬಿಸಿದ್ದಾರೆ ಎಂದಿದ್ದಾರೆ. 

 

loader