ಬೆಂಗಳೂರು ಮೆಟ್ರೋ ನಿಲ್ದಾಣಗಳಲ್ಲಿ ಬೈಕ್ ಪಾರ್ಕ್ ಮಾಡುತ್ತೀರಾ, ಹಾಗಾದ್ರೆ ಹುಷಾರ್. ನಿಮ್ಮ ಬೈಕ್ ಗಳನ್ನು ಕಳ್ಳತನ ಮಾಡುವ ಗುಂಪೊಂದು ಇದೆ.ಆದ್ರೆ ಈ ಗುಂಪಿನ ನಾಲ್ವರು ಈಗ ಅಂದರ್ ಆಗಿದ್ದಾರೆ. 

ಬೆಂಗಳೂರು : ಬೆಂಗಳೂರಿನ ಮೆಟ್ರೋ ನಿಲ್ದಾಣಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಆರೋಪಿಗಳ‌ನ್ನು ಬಂಧಿಸಲಾಗಿದೆ. 

ಮೆಟ್ರೋ‌ ನಿಲ್ದಾಣಗಳಲ್ಲಿದ್ದ ಬೈಕ್ ಗಳನ್ನ ಕಳ್ಳತನ ಮಾಡುತ್ತಿದ್ದ ನಾಲ್ವರಯ ಆರೋಪಿಗಳನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪ್ರವೀಣ್ ಕುಮಾರ್ , ಫೈಜ್ ಷರೀಫ್, ಮಹೇಶ್ ಅಲಿಯಾಸ್ ಮಚ್ಚಿ, ದಿನೇಶ್ ಎನ್ನಲಾಗಿದೆ. 

ಆರೋಪಿಗಳು ಮೆಟ್ರೋ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡುತ್ತಿದ್ದ ಬೈಕ್ ಗಳನ್ನೆ ಟಾರ್ಗೆಟ್ ಮಾಡಿ, ಎಗರಿಸುತ್ತಿದ್ದರು. ನಕಲಿ ಕೀ ಬಳಸಿಕೊಂಡು ಪ್ರಯಾಣಿಕರ ಸೋಗಿನಲ್ಲಿ ಕಳವು ಮಾಡುತ್ತಿದ್ದರು. 

ಸದ್ಯ ಆರೋಪಿಗಳನ್ನ ಬಂಧಿಸಿರುವ ಮಾಗಡಿ ರಸ್ತೆ ಪೊಲೀಸರು 55 ಬೈಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.