ಮುಷ್ಕರಕ್ಕೆ ಮುಂದಾಗಿದ್ದಾರೆ ಮೆಟ್ರೋ ಸಿಬ್ಬಂದಿ; ಸಂಚಾರ ಸ್ಥಗಿತ

First Published 7, Mar 2018, 2:42 PM IST
Metro Service not available on March 22
Highlights

ನಮ್ಮ ಮೆಟ್ರೋ ಸಿಬ್ಬಂದಿ ಮುಷ್ಕರ ನಡೆಸಲು ಮುಂದಾಗಿದ್ದಾರೆ.  ಮಾರ್ಚ್ 22 ರಂದು ನಮ್ಮ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ. 

ಬೆಂಗಳೂರು (ಮಾ. 07): ನಮ್ಮ ಮೆಟ್ರೋ ಸಿಬ್ಬಂದಿ ಮುಷ್ಕರ ನಡೆಸಲು ಮುಂದಾಗಿದ್ದಾರೆ.  ಮಾರ್ಚ್ 22 ರಂದು ನಮ್ಮ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ. 

ಮೆಟ್ರೋ ಆಡಳಿತ ಮಂಡಳಿಯಿಂದ ಕಿರುಕುಳ ಆರೋಪಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.  ಕಳೆದ 8 ವರ್ಷಗಳಿಂದ  ನೌಕರರ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿರುವ  BMRCL ಕಳೆದ ಜುಲೈನಲ್ಲಿ ಮೆಟ್ರೋ ಸಿಬ್ಬಂದಿ ಮುಷ್ಕರ ನಡೆಸಿದ್ದರು.  

ಸರ್ಕಾರ ಎಸ್ಮಾ ಅಸ್ತ್ರ ಪ್ರಯೋಗಿಸಿ ಪ್ರತಿಭಟನಾಕಾರರನ್ನು ಹತ್ತಿಕ್ಕಿತ್ತು. ಎಸ್ಮಾಕ್ಕೆ ಹೆದರದೇ  ಮಾರ್ಚ್ 22 ಕ್ಕೆ ಮೆಟ್ರೋ ಸಿಬ್ಬಂದಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.  ಬೆಂಗಳೂರು ನಾಲ್ಕು ದಿಕ್ಕಿನಲ್ಲಿ 22 ರಂದು ಮೆಟ್ರೋ ಸೇವೆ ಸಂಚಾರ ಮಾಡೋದು  ಬಹುತೇಕ ಅನುಮಾನ.  ಬೆಳಗ್ಗೆ 5 ರಿಂದ ರಾತ್ರಿ 11 ಗಂಟೆಯವರಿಗೆ ಮೆಟ್ರೋ ಸಂಚಾರ ಸ್ಥಗಿತ ಸಾಧ್ಯತೆ ಇದೆ ಎಂದು ನಮ್ಮ ಮೆಟ್ರೋ ನೌಕರರ ಸಂಘದ ಅಧ್ಯಕ್ಷ ಸೂರ್ಯನಾರಾಯಣಮೂರ್ತಿ ಹೇಳಿದ್ದಾರೆ. 

 

loader