ನಟಿ ಶ್ರುತಿ ಹರಿಹರನ್ ಮಾಡಿರುವ ನಟ ಅರ್ಜುನ್ ಸರ್ಜಾ ಮೇಲಿನ ಮೀಟೂ ಘಾಟು ದಿನದಿಂದ ದಿನಕ್ಕೆ ತಾರಕಕ್ಕೇರಿದ್ದು, ಇದೀಗ ಸರ್ಜಾ ವಿರುದ್ಧ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಬೆಂಗಳೂರು, [ನ.14]: ನಟಿ ಶ್ರುತಿ ಹರಿಹರನ್ ಮಾಡಿರುವ ನಟ ಅರ್ಜುನ್ ಸರ್ಜಾ ಮೇಲಿನ ಮೀಟೂ ಘಾಟು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಕ್ಕೆ ಪೂರಕವೆಂಬಂತೆ ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಸಿಡಿ ಬಾಂಬ್ ಸಿಡಿಸಿದ್ದಾರ. ಈ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.

ನಾನು ಸಕ್ಕರೆ, ಮಾಧ್ಯಮದವರು ಇರುವೆ : ಶೃತಿ ಹರಿಹರನ್

ಇಂದು [ಬುಧವಾರ] ಮಹಿಳಾ ಆಯೋಗ ಮುಂದೆ ಹಾಜರಾದ ಬಳಿಕ ಮಾತನಾಡಿದ ಶ್ರುತಿ ಹರಿಹರನ್, ನನ್ನ ಬಳಿ ವಿಡಿಯೋ ಇದೆ. ಸ್ಟ್ರಾಂಗ್ ಎವಿಡೆನ್ಸ್ ಇದೆ. ಸಿಡಿಯನ್ನು ಈಗಾಗಲೇ ಕೋರ್ಟ್ ಗೆ ನೀಡಿದ್ದೇನೆ ಎಂದು ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಸಿಡಿ ಬಾಂಬ್ ಸಿಡಿಸಿದರು.

ಶ್ರುತಿ ಹರಿಹರನ್ ಕೋರ್ಟ್ ಗೆ ನೀಡಿರುವ ಸಿಡಿಯಲ್ಲೇನಿದೆ? ಎನ್ನುವುದು ಮಾತ್ರ ಬಾರೀ ಕುತೂಹಲ ಮೂಡಿಸಿದೆ.