ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಲೇಖಕಿ ಹೇಳಿಕೆಗಳಿಗೆ ಇದೀಗ ಸ್ವತಃ ಚೇತನ್ ಭಗತ್ ಅವರೇ ಪ್ರತಿಕ್ರಿಯಿಸಿದ್ದು ಇಂತಹ ಆರೋಪ ಮಾಡುವ ಮೂಲಕ ತಮ್ಮ ಹಾಗೂ ತಮ್ಮ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ನವದೆಹಲಿ : ತಮ್ಮ ವಿರುದ್ಧ #Me Too ಮೂಲಕ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಮಾಡಿರುವ ಸಂಬಂಧ ಪ್ರತಿಕ್ರಿಯಿಸಿರುವ ಚೇತನ್ ಭಗತ್ ಇದು ತಮ್ಮ ಮೇಲೆ ಮಾಡುತ್ತಿರುವ ಸುಳ್ಳು ಆರೋಪ ಎಂದು ಹೇಳಿದ್ದಾರೆ.
2013ರಲ್ಲಿ ನಡೆದ ಸಂಭಾಷಣೆಯ ಸ್ಕ್ರೀನ್ ಶಾಟ್ ಇ ಮೇಲ್ ಗಳನ್ನು ಶೆರ್ ಮಾಡಿಕೊಂಡಿದ್ದು ಅವೆಲ್ಲವೂ ಕೂಡ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ.
ಸ್ವತಃ ಇರಾ ತ್ರಿವೇದಿ ಅವರೇ ಮಾಡಿದ ಇ ಮೇಲ್ ನನ್ನ ಬಳಿ ಇದ್ದು ಯಾರಿಗೆ ಯಾರು ಕಿಸ್ ಮಾಡಲು ಬಯಸಿದ್ದಾರೆ ಎನ್ನುವುದನ್ನು ತಿಳಿಯುತ್ತೆ.
2010ರಲ್ಲಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎನ್ನುವ ಆರೋಪಕ್ಕೆ ಈ ಸಂದೇಶಗಳೇ ಉತ್ತರ ನೀಡುತ್ತದೆ ಎಂದು ಸ್ವತಃ ಚೇತನ್ ಭಗತ್ ಹೇಳಿದ್ದಾರೆ.
ಇದು ನನಗೂ ನನ್ನ ಕುಟುಂನಕ್ಕೂ ನೀಡುತ್ತಿರುವ ಮಾನಸಿಕ ಕಿರುಕುಳವಾಗಿದೆ. ಇಂತಹ ಸುಳ್ಳು ಆರೋಪಗಳ ಮೂಲಕ ಹಿಂಸಿಸಬೇಡಿ ಎಂದು ಸ್ವತಃ ಚೇತನ್ ಭಗತ್ ಟ್ವೀಟ್ ಮಾಡಿದ್ದಾರೆ.
ಅಕ್ಟೋಬರ್ 13ರಂದು ಇರಾ ತ್ರಿವೇದಿ ಚೇತನ್ ಭಗತ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಸಂಪೂರ್ಣ ವಿಚಾರವನ್ನು ಹಂಚಿಕೊಂಡಿದ್ದರು.
