ಬಾಲಿವುಡ್ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಮೀ ಟೂ ಬಿರುಗಾಳಿ ಇದೀಗ ಕಾಲಿವುಡ್ ಅಂಗಳವನ್ನೂ ಕೂಡ ತಲುಪಿದೆ. ಹೆಬ್ಬುಲಿ ನಟಿ ಅಮಲಾ ಪೌಲ್ ಇದೀಗ ಮೀ ಟೂ ಬಾಂಬ್ ಸಿಡಿಸಿದ್ದಾರೆ. 

ಚೆನ್ನೈ : ಬಾಲಿವುಡ್, ಸ್ಯಾಂಡಲ್ ವುಡ್ ನಲ್ಲಿ ಮೀ ಟೂ ಬಿರುಗಾಳಿ ಬೀಸುತ್ತಿದ್ದು ಇದೇ ವೇಳೆ ಇನ್ನೋರ್ವ ನಟಿ ಹೊಸ ಬಾಂಬ್ ಸಿಡಿಸಿದ್ದಾರೆ. 

ಬಹುಭಾಷಾ ನಟಿ, ಕನ್ನಡದ ಹೆಬ್ಬುಲಿ ಚಿತ್ರದಲ್ಲಿ ನಟಿಸಿದ್ದ ಅಮಲಾ ಪೌಲ್ ಇದೀಗ ಮೀ ಟೂ ಆರೋಪ ಮಾಡಿದ್ದಾರೆ. 

ತಿರುಟ್ಟು ಪಾಯಲೆ 2 ಚಿತ್ರದಲ್ಲಿ ನಟಿಸುವ ವೇಳೆ ಈ ಚಿತ್ರದ ನಿರ್ದೇಶಕ ಸುಶಿ ಗಣೇಶನ್ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದರು ಎಂದು ಬರೆದುಕೊಂಡಿದ್ದಾರೆ. 

ನಿರ್ದೇಶಕ ಸುಶಿ ತಮ್ಮ ಬಳಿ ಕೆಟ್ಟದಾಗಿ ವರ್ತಿಸಿದ್ದು ಇದಂದೊ ಅತ್ಯಂತ ಕೆಟ್ಟ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ. 

ಮಾತು ನಡತೆ ಎಲ್ಲದಲ್ಲಿರಯೂ ಕೂಡ ಅನುಚಿತವಾಗಿ ನಡೆದುಕೊಂಡಿದ್ದರು ಎಂದು ಅಮಲಾ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. 

Scroll to load tweet…