ಮೀಟೂ ಬಿಸಿ: ಅರ್ಜುನ್ ಸರ್ಜಾ ಪರ ನಿಂತ ಹಿರಿಯ ನಟಿಯರು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 22, Oct 2018, 12:53 PM IST
Metoo Actor Arjun Sarja get support from senior actress
Highlights

ಸ್ಯಾಂಡಲ್‌ವುಡ್‌ನ ಮೀಟೂ ಆರೋಪಗಳು ತೀವ್ರವಾಗುತ್ತಿದೆ. ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ದ ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪಕ್ಕೆ ಇದೀಗ ಎರಡು ಗುಂಪುಗಳು ಹೋರಾಟ ಆರಂಭಿಸಿದೆ. ಒಂದು ಗುಂಪು ಶ್ರುತಿ ಪರ ನಿಂತಿದ್ದರೆ, ಮತ್ತೊಂದು ಗುಂಪು ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತಿದೆ.

ಬೆಂಗಳೂರು(ಅ.22): ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ದ ನಟಿ ಶ್ರುತಿ ಹರಿಹರನ್ ಮಾಡಿರುವ ಕಿರುಕುಳ ಆರೋಪ ಇದೀಗ ಕಾವೇರುತ್ತಿದೆ.  ಒಂದೆಡೆ ಶ್ರುತಿ ಹರಿಹರನ್‌ಗೆ ಬೆಂಬಲ ವ್ಯಕ್ತವಾಗುತ್ತಿದ್ದಂತೆ, ಇತ್ತ ನಟ ಅರ್ಜುನ್ ಸರ್ಜಾ ಪರ ಹಲವು ಹಿರಿಯ ನಟಿಯರು ಬ್ಯಾಟಿಂಗ್ ಮಾಡಿದ್ದಾರೆ.

ಅರ್ಜುನ್ ಮೇಲೆ ಶ್ರುತಿ ಮಾಡಿರುವ ಆರೋಪಕ್ಕೆ ಹಿರಿಯ ನಟಿ ಸರೋಜಾ ದೇವಿ  ಪ್ರತಿಕ್ರಿಯಿಸಿದ್ದಾರೆ. ಅರ್ಜುನ್ ಸರ್ಜಾ ಫ್ಯಾಮಿಲಿ ಕೆಟ್ಟ ಕುಟುಂಬವಲ್ಲ. ನಾವೆಲ್ಲಾ ಹಲವು ವರ್ಷಗಳಿಂದ ಆತ್ಮೀಯರಾಗಿದ್ದೇವೆ. ಅರ್ಜುನ್ ಉತ್ತಮ ವ್ಯಕ್ತಿತ್ವ ಉಳ್ಳವರು ಎಂದದು  ಸರೋಜಾ ದೇವಿ ಹೇಳಿದ್ದಾರೆ.

"

ನಾನು ಕೂಡ ಅರ್ಜುನ್ ಸರ್ಜಾ ಜೊತೆ ಸಿನಿಮಾದಲ್ಲಿ ಆಕ್ಟ್ ಮಾಡಿದ್ದೇನೆ. ನಮ್ಮ ಕಾಲದಲ್ಲಿ ಇಲ್ಲದ ಸಮಸ್ಯೆ ಈಗ ಉದ್ಭವವಾಗಿದೆ. ಅಪ್ಪು ಜೊತೆ ಈಗಲೂ ನಟನೆ ಮಾಡುತ್ತೇನೆ. ಅವರೆಲ್ಲಾ ತುಂಬಾ ಆತ್ಮೀಯವಾಗಿ ನಡೆದುಕೊಳ್ಳುತ್ತಾರೆ . ಅರ್ಜುನ್ ಸರ್ಜಾ ಹಾಗೂ ಅವರ ಕುಟುಂಬ ಏನು ಅನ್ನೋದು ನನ್ನ ವಯಸ್ಸಿನ ನಟಿಯರಿಗೆ ಕೇಳಿದರೆ ಅರ್ಥವಾಗುತ್ತೆ. ಹೀಗಾಗಿ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಸರೋಜಾ ದೇವಿ, ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತಿದ್ದಾರೆ.

"

ಸರೋಜಾದೇವಿ ಬೆನ್ನಲ್ಲೇ ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ ಪ್ರತಿಕ್ರಿಯೆ ನೀಡಿದ್ದಾರೆ. ಅರ್ಜುನ್ ಸರ್ಜಾ ಉತ್ತಮ ವ್ಯಕ್ತಿ. ಆದರೆ ಶೃತಿ ಹರಿಹರನ್ ಅವರ ಅಭಿಪ್ರಾಯದ ವಿರುದ್ಧ ನಾನು ಪ್ರತಿಕ್ರಿಯೆ ‌ನೀಡುವುದಿಲ್ಲ. ನಾನು ಒಬ್ಬ ಹೆಣ್ಣು ಮಗಳಾಗಿ ಕನ್ನಡದ ಎಲ್ಲ ಕಲಾವಿದೆಯರಿಗು ಒಳ್ಳೆದಾಗಬೇಕು. ಶೃತಿ ಹರಿಹರನ್ ಕೂಡ ನನಗೆ ಗೊತ್ತು ಅವರು ಒಳ್ಳೆಯ ಕಲಾವಿದೆ. ಎಂದು ತಾರಾ ಹೇಳಿದ್ದಾರೆ. 

loader