ಸಿದ್ದರಾಮಯ್ಯ ಕುಮಾರಸ್ವಾಮಿ ಕೂಡಿ ಆಡಳಿತ ಮಾಡಿದವರು, ಹೀಗಾಗಿ ಅವರಿಗೂ ಸಿದ್ದರಾಮಯ್ಯ ಏನೂ ಮಾಡಿಲ್ಲ ಅನ್ನೋದು ಗೊತ್ತಿದೆ,

ಬಾಗಲಕೋಟೆ(ಫೆ.24):ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಡೈರಿ ಆರೋಪದ ಕುರಿತು ಮಾಜಿ ಸಚಿವ ಎಚ್.ವೈ.ಮೇಟಿ ಪ್ರತಿಕ್ರಿಯೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಯಡಿಯೂರಪ್ಪ ಸಿಎಂ ಸಿದ್ದರಾಮಯ್ಯ ಮೇಲೆ ಡೈರಿ ಆರೋಪ ಮಾಡಿದ್ದು ಸರಿಯಲ್ಲ. ಯಾವುದೋ ಹಳೆ ಡೈರಿ ತಂದು ನಿಜವಾದ ಡೈರಿ ಎಂದು ಬಿಂಬಿಸಲಾಗುತ್ತಿದೆ. ಡೈರಿಯನ್ನ ಯಾರು ಬೇಕಾದರೂ ಬರೆಯಬಹುದು. ಸಿದ್ದರಾಮಯ್ಯ ಇಂತಹ ತಪ್ಪು ಮಾಡೋರಲ್ಲ. ಅವರ ಮೇಲಿನ ಆರೋಪವನ್ನು ಸಹಿಸೋದಿಲ್ಲ. ಐಟಿ ರೇಡ್ ಮಾಡಿದರೆ ಅದ್ಹೇಗೆ ಬಹಿರಂಗ ಮಾಡ್ತಾರೆ. ಯಡಿಯೂರಪ್ಪ ಸ್ವಲ್ಪ ಎಮೋಷನಲ್ ಮನುಷ್ಯ, ಎಮೋಷನಲ್ ಬಿಟ್ಟು ಸಮಾಧಾನದಿಂದ ರಾಜಕೀಯ ಮಾಡಲಿ' ಎಂದರು.

ಕುಮಾರಸ್ವಾಮಿ ಸಿದ್ದರಾಮಯ್ಯ'ಗೆ ರಾಜೀನಾಮೆ ನೀಡಲಿ ಎಂಬ ಹೇಳಿಕೆ ನೀಡಿರೋ ವಿಚಾರದ ಬಗ್ಗೆ ಮಾತನಾಡಿದ ಅವರು,ಡೈರಿಯೇ ಪಕ್ಕಾ ಇಲ್ಲವಾದಾಗ ಸಿಎಂ ರಾಜೀನಾಮೆ ಪ್ರಶ್ನೆಯೇ ಇಲ್ಲ. ವಿರೋಧಪಕ್ಷದಲ್ಲಿ ಇರೋ ಕುಮಾರಸ್ವಾಮಿ ಅವರಿಗೆ ಬೇರೆ ಏನೂ ಆಧಾರವಿಲ್ಲ, ಹೀಗಾಗಿ ಅವರು ಹೇಳೋದು ಅದನ್ನೆ. ಸಿದ್ದರಾಮಯ್ಯ ಕುಮಾರಸ್ವಾಮಿ ಕೂಡಿ ಆಡಳಿತ ಮಾಡಿದವರು, ಹೀಗಾಗಿ ಅವರಿಗೂ ಸಿದ್ದರಾಮಯ್ಯ ಏನೂ ಮಾಡಿಲ್ಲ ಅನ್ನೋದು ಗೊತ್ತಿದೆ, ಆದರೆ ರಾಜಕೀಯವಾಗಿ ಸುಮ್ಮನೆ ಹೇಳ್ತಾರೆ' ಎಂದರು.