ಪ್ರಕರಣವನ್ನು ಸಿಐಡಿ ವಿಚಾರಣೆಗೆ ಹಸ್ತಾಂತರಿಸಲಾಗಿತ್ತು. ಡಿಸೆಂಬರ್ 28ರಂದು ನಾಲ್ವರು ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು

ಬಾಗಲಕೋಟೆ(ಜ.12): ಹೆಚ್.ವೈ. ಮೇಟಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ದೂರಿರುವ ನಾಲ್ವರು ಆರೋಪಿಗಳಿಗೆ ನ್ಯಾಯಾಲಯವು ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ.

ಡಿಏಆರ್ ಪೇದೆ ಸುಭಾಸ್ ಮುಗಳಖೋಡ, ಸಿದ್ದಲಿಂಗ ಅಬಲಕಟ್ಟಿ,ಮಾರುತಿ ಮಿರಜಕರ್,ಅಶೋಕ ನಾಗಲೋಟಿ ಅವರಿಗೆ ಬಾಗಲಕೋಟೆ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಹೆಚ್.ವೈ. ಮೇಟಿ ವಿರುದ್ಧ ಸುಳ್ಳು ಆರೋಪ ಮಾಡುವಂತೆ ಜೀವಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆ ಡಿಸೆಂಬರ್ 17ರಂದು ನಾಲ್ವರ ವಿರುದ್ದ ನವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಜೀವಬೆದರಿಕೆ,ಮಾನಭಂಗ ಯತ್ನ,ಅಪಹರಣ ಸೇರಿದಂತೆ ವಿವಿಧ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿತ್ತು.

ಪ್ರಕರಣವನ್ನು ಸಿಐಡಿ ವಿಚಾರಣೆಗೆ ಹಸ್ತಾಂತರಿಸಲಾಗಿತ್ತು. ಡಿಸೆಂಬರ್ 28ರಂದು ನಾಲ್ವರು ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಜನವರಿ ನಾಲ್ಕರಂದು ಸುಭಾಸ್ ಮುಗಳಖೋಡ ಪರ ಎಸ್.ಸಿ. ಹಿರೆಮಠ ಮೂವರ ಪರ ಆನಂದ ಕೊಳ್ಳಿ ವಾದ ಮಂಡಿಸಿದ್ದರು.

ತೀರ್ಪು ಕಾಯ್ದಿರಿಸಿದ ನ್ಯಾಯಾಲಯ ಸಾಕ್ಷ ನಾಶಪಡಿಸದಂತೆ ,ಸಿಐಡಿ ತಂಡ ವಿಚಾರಣೆಗೆ ಕರೆದಾಗ ಹಾಜರಿ,50 ಸಾವಿರ ರೂ ಬಾಂಡ್, ಜಿಲ್ಲಾ ವ್ಯಾಪ್ತಿ ಬಿಟ್ಟು ಹೊರಹೋಗದಂತೆ ಷರತ್ತಿನ ಮೂಲಕ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.