ಮೇಟಿಗೆ ಸಿಗಲಿದೆಯಾ ಟಿಕೆಟ್..? ಯಾವ ಕ್ಷೇತ್ರದಿಂದ ಸ್ಪರ್ಧೆ..?

First Published 8, Mar 2018, 7:39 AM IST
Meti May Contest Election
Highlights

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ​ಗಳ ಸಂಖ್ಯೆ ಬೆಳೆ​ಯು​ತ್ತಲೇ ಇದ್ದು, ಪ್ರಭಾ​ವಿ​ಗಳ ಪುತ್ರರು ಒಂದೇ ಕ್ಷೇತ್ರ​ದ ಟಿಕೆ​ಟ್‌​ಗಾಗಿ ಪೈಪೋಟಿಗೆ ಮುಂದಾ​ಗಿ​ರುವ ಕ್ಷೇತ್ರ​ಗಳ ಪಟ್ಟಿಗೆ ಈಗ ಮಲ್ಲೇ​ಶ್ವರ ಸೇರ್ಪ​ಡೆ​ಯಾ​ಗಿ​ದೆ.

ಬೆಂಗ​ಳೂ​ರು : ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ​ಗಳ ಸಂಖ್ಯೆ ಬೆಳೆ​ಯು​ತ್ತಲೇ ಇದ್ದು, ಪ್ರಭಾ​ವಿ​ಗಳ ಪುತ್ರರು ಒಂದೇ ಕ್ಷೇತ್ರ​ದ ಟಿಕೆ​ಟ್‌​ಗಾಗಿ ಪೈಪೋಟಿಗೆ ಮುಂದಾ​ಗಿ​ರುವ ಕ್ಷೇತ್ರ​ಗಳ ಪಟ್ಟಿಗೆ ಈಗ ಮಲ್ಲೇ​ಶ್ವರ ಸೇರ್ಪ​ಡೆ​ಯಾ​ಗಿ​ದೆ.

ಮಲ್ಲೇ​ಶ್ವರ ಕ್ಷೇತ್ರದ ಟಿಕೆ​ಟ್‌​ಗಾಗಿ ಸಚಿವ ಎಂ.ಆರ್‌. ಸೀತಾರಾಂ ಅವರ ಪುತ್ರ ರಕ್ಷಾ ಸೀತಾರಾಂ ಹಾಗೂ ಕಳೆ​ದ ಬಾರಿಯ ಅಭ್ಯರ್ಥಿ ಬಿ.ಕೆ. ಶಿವರಾಂ ಅವರ ಪುತ್ರ ರಕ್ಷಿತ್‌ ಶಿವರಾಂ ಅರ್ಜಿ​ಯನ್ನು ಕೆಪಿ​ಸಿಸಿ ಕಚೇ​ರಿ​ಯಿಂದ ಪಡೆ​ದು​ಕೊಂಡಿ​ದ್ದಾ​ರೆ.

ಕುತೂ​ಹ​ಲ​ಕಾರಿ ಸಂಗ​ತಿ​ಯೆಂದರೆ, ಇದೇ ಕ್ಷೇತ್ರಕ್ಕೆ ಬಿ.ಕೆ. ಶಿವರಾಂ ಕೂಡ ಅರ್ಜಿ ಪಡೆ​ದು​ಕೊಂಡಿ​ದ್ದಾರೆ. ಇನ್ನು ಲೈಂಗಿಕ ಹಗ​ರ​ಣಕ್ಕೆ ಸಿಲುಕಿ ಸಚಿವ ಸ್ಥಾನ ಕಳೆ​ದು​ಕೊಂಡ ಎಚ್‌.ವೈ. ಮೇಟಿ ಅವರು ಬಾಗ​ಲ​ಕೋಟೆ ಕ್ಷೇತ್ರದ ಟಿಕೆ​ಟ್‌​ಗಾಗಿ ಅರ್ಜಿ ಪಡೆ​ದು​ಕೊಂಡಿ​ದ್ದಾ​ರೆ ಎಂದು ಮೂಲ​ಗಳು ತಿಳಿ​ಸಿ​ವೆ.

loader