Asianet Suvarna News Asianet Suvarna News

ಇಷ್ಟಕ್ಕೆ ನಿಲ್ಲಲ್ಲ ಮಳೆರಾಯನ ಆರ್ಭಟ, ಇನ್ನೂ ಮೂರ್ನಾಲ್ಕು ದಿನ ಇದೇ ಕಾಟ

ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಕಡೆಗಳಲ್ಲಿ ಎಡಬಿಡದೇ ಮಳೆ ಸುರಿಯುತ್ತಿದ್ದು, ಜನರಿಗೆ ಸಾಕ್ ಮಾಡಿಟ್ಟಿದೆ.ವರುಣ ದೇವನ ಆರ್ಭಟಕ್ಕೆ ಮನೆ-ಮಠ ಕಳೆದುಕೊಂಡ ಜನರ ಪರಿಸ್ಥಿತಿ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಇಷ್ಟಕ್ಕೆ ನಿಲ್ಲದ ಮಳೆರಾಯನ ಕಾಟ, ಮುಂದಿನ  ಮೂರ್ನಾಲ್ಕು ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆಯಂತೆ ಹೀಗಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇದು ಜನರಿಗೆ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. 

meteorological department Forecast 3 4 Days Extremely heavy rain In Karnataka
Author
Bengaluru, First Published Aug 6, 2019, 8:49 PM IST

ಬೆಂಗಳೂರು, [ಆ.06]: ರಾಜ್ಯದ ಎಲ್ಲ ಭಾಗಗಳಲ್ಲೂ ಮುಂಗಾರು ಚುರುಕಾಗಿದ್ದು, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮತ್ತಷ್ಟು ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಮಳೆಯಬ್ಬರ, ಕೊಚ್ಚಿ ಹೋಗುತ್ತಿದೆ ಬದುಕು!: ಮನಕಲಕುವ ಚಿತ್ರಗಳು

ಮುಂಜಾಗ್ರತಾ ಕ್ರಮವಾಗಿ ಹವಮಾನ ಇಲಾಖೆ ಆಗಸ್ಟ್ 7ರಿಂದ ಆಗಸ್ಟ್ 9ರ ವರೆಗೆ ರೆಡ್ ಅಲರ್ಟ್ ಘೋಷಿಸಿದ್ದು, ಮೂರ್ನಾಲ್ಕು ದಿನಗಳಲ್ಲಿ 204 ಮಿ.ಮೀ.ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ಕೊಡಗಿನಲ್ಲಿ ಭಾರೀ ಮಳೆ ಮುನ್ಸೂಚನೆ: ಆರೆಂಜ್, ರೆಡ್ ಅಲರ್ಟ್ ಘೋಷಣೆ

ಇನ್ನು ಈ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಜಿ.ಎಸ್‌.ಶ್ರೀನಿವಾಸರೆಡ್ಡಿ ಅವರು ಸುವರ್ಣನ್ಯೂಸ್ ಗೆ ಮಾಹಿತಿ ನೀಡಿದ್ದು,  ಪ್ರಸ್ತುತ ಸುರಿಯುತ್ತಿರುವ ಮಳೆ  ಆಗಸ್ಟ್ ತಿಂಗಳದ ಮಳೆ ಕೊರತೆ ಕಡಿಮೆ ಮಾಡಿದೆ. ಜುಲೈ ಅಂತ್ಯಕ್ಕೆ ಶೇ.19 ರಷ್ಟು ಮಳೆ ಕೊರತೆ ಇತ್ತು, ಈಗ ಶೇ. 10ಕ್ಕೆ ಬಂದಿದೆ. ಸದ್ಯದ ಮುನ್ಸೂಚನೆ ನೋಡಿದ್ರೆ ಮಳೆ‌ ಕೊರತೆ ಹೋಗುವ ಎಲ್ಲಾ ಲಕ್ಷಣಗಳಿವೆ ಎಂದು ತಿಳಿಸಿದರು.

ವರುಣನ ಅರ್ಭಟಕ್ಕೆ ಉತ್ತರ, ಮಲೆನಾಡು, ಕರಾವಳಿ ಕರ್ನಾಟಕ ತತ್ತರ

ಸದ್ಯಕ್ಕೆ ಸೈಕ್ಲೋನ್ ಉಂಟಾಗುವ ಲಕ್ಷಣಗಳು ಕಾಣಿಸ್ತಿಲ್ಲ. ಆದರೆ ಮಳೆ ಮಾತ್ರ ಇನ್ನಷ್ಟು ಹೆಚ್ಚಾಗುವ ಎಲ್ಲಾ ಲಕ್ಷಣಗಳು ಇದ್ದು, ಬೆಂಗಳೂರು ಜನರ ನೀರಿನ ಸಮಸ್ಯೆಗೆ ಆಗಸ್ಟ್ ಮಳೆ ಪರಿಹಾರ ನೀಡಬಹುದು. ಯಾಕಂದ್ರೆ ಕೊಡಗು ಭಾಗದಲ್ಲಿ ಹೆಚ್ಚು ಮಳೆ ಆಗುತ್ತಿರುವುದರಿಂದ ಕೆ.ಆರ್.ಎಸ್ ತುಂಬುವ ಹಂತಕ್ಕೆ ಬರಬಹುದು ಎಂದು ಹೇಳಿದರು.

Follow Us:
Download App:
  • android
  • ios