ವರುಣನ ಅರ್ಭಟಕ್ಕೆ ಉತ್ತರ, ಮಲೆನಾಡು, ಕರಾವಳಿ ಕರ್ನಾಟಕ ತತ್ತರ

ಬೆಳಗಾವಿ, ವಿಜಯಪುರ, ಬಾಗಲಕೋಟೆ,  ರಾಯಚೂರು, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ಜಿಲ್ಲೆಯಾದ್ಯಂತ ಬೆಂಬಿಡದೆ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತ. ಇಲ್ಲಿದೆ ವಿಡಿಯೋ ಗ್ಯಾಲರಿ

Heavy Rain Disrupt Normal Life Across Coastal Malnad North Karnataka

ಬೆಂಗಳೂರು (ಆ.06): ಮಳೆಗಾಲದ ಮೊದಲಾರ್ಧದಲ್ಲಿ ನಾಪತ್ತೆಯಾಗಿದ್ದ ಮಳೆರಾಯ, ಆಗಸ್ಟ್‌ನಲ್ಲಿ ರುದ್ರವಾತಾರ ತಾಳಿ ಎಂಟ್ರಿ ಕೊಟ್ಟಿದ್ದಾನೆ.

ಮಳೆಗಾಗಿ ಹಾತೊರೆಯುವ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದೆ. ಜೊತೆಗೆ ಮಹಾರಾಷ್ಟ್ರದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಬೇರೆ. ಮಲಪ್ರಭಾ, ಕೃಷ್ಣ ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿ ಮಳೆ ಜನಜೀವನ ಅಸ್ತವ್ಯಸ್ತವಾಗಿದೆ.

ಇತ್ತ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಿಗೆ ತಡವಾಗಿ ಕಾಲಿಟ್ಟಿದ್ದ ಮುಂಗಾರು, ಬಡ್ಡಿ-ಚಕ್ರಬಡ್ಡಿ ಸಮೇತ ಸುರಿಯುತ್ತಿದೆ. ಕಳೆದ ವರ್ಷದ ಮಳೆಯಿಂದ ಜರ್ಜರಿತವಾಗಿದ್ದ ಕೊಡಗಿನ ಗಾಯ ಇನ್ನೂ ವಾಸಿಯಾಗಿಲ್ಲ. ಈ ಬಾರಿಯೂ ಮಳೆಯ ರೌದ್ರವಾತಾರ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಕಳೆದ ಬೇಸಿಗೆಯಲ್ಲಿ ಸೆಖೆಯಲ್ಲಿ ಬಳಲಿ ಬೆಂಡಾಗಿ, ಬೆವರಿನಲ್ಲಿ ತೋಯ್ದಿದ್ದ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳೂ ಈಗ ಮಳೆಗೆ ಒದ್ದೆ-ಮುದ್ದೆಯಾಗಿವೆ.

ಇದನ್ನೂ ನೋಡಿ | ರಾಜ್ಯದಲ್ಲಿ ಮಳೆಯಬ್ಬರ, ಕೊಚ್ಚಿ ಹೋಗುತ್ತಿದೆ ಬದುಕು!: ಮನಕಲಕುವ ಚಿತ್ರಗಳು

ಬೆಳಗಾವಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಬ್ಲಾಕ್; ಶಾಲಾ-ಕಾಲೇಜುಗಳಿಗೆ ರಜೆ:

"

"

ಕೊಚ್ಚಿಹೋದ ಆಟೋ- ಚಾಲಕನ ರಕ್ಷಣೆ

"

ವಿಜಯಪುರದಲ್ಲಿ ಜಾನುವಾರುಗಳೊಂದಿಗೆ ಬೀಗರ ಮನೆಗೆ!

"

ಮಳೆಗೆ ನಲುಗಿದ ಬಾಗಲಕೋಟೆ

"

ಉಕ್ಕಿ ಹರಿಯುವ ಕೃಷ್ಣಾ, ತುಂಗಾ- ಭದ್ರಾ; ರಾಯಚೂರು ಜನಜೀವನ ಅಸ್ತವ್ಯಸ್ತ:

"

ಕೊಡಗಿನಲ್ಲಿ ಧರೆಗುರುಳಿದ ಮರಗಳು 

"

ದಕ್ಷಿಣ ಕನ್ನಡದಲ್ಲಿ ‘ಜೋರು ಬರ್ಸ’

"

ಉಡುಪಿ ಮೀನುಗಾರರಿಗೆ ಮೊದಲ ದಿನವೇ ಲಾಸ್! 

" 

ಪ್ರವಾಹ ಭೀತಿ: ಯಾದಗಿರಿಯಲ್ಲಿ ಡಂಗುರ ಸಾರಿ ಎಚ್ಚರಿಕೆ!
"

ಉಕ್ಕಿ ಹರಿಯುತ್ತಿರುವ ಹೇಮಾವತಿ; ಹೊಳೆ ಮಲ್ಲೇಶ್ವರ ದೇಗುಲ ಮೆಟ್ಟಿಲು ಜಲಾವೃತ!

"

ದ್ವೀಪವಾದ ಉತ್ತರ ಕನ್ನಡದ ಸಿದ್ದಾಪುರ!

"

 

"  

ಹುಬ್ಬಳ್ಳಿಯಲ್ಲಿ ರೈಲ್ವೇ ಹಳಿಯೇ ಕೊಚ್ಚಿ ಹೋಯ್ತು!

"

ಮಳೆರಾಯನಿಂದ ಭಕ್ತರಿಗೆ ದಿಗ್ಬಂಧನ!

"
 

Latest Videos
Follow Us:
Download App:
  • android
  • ios