ಪ್ರಮುಖ ಕ್ರೀಡಾಕೂಟದಲ್ಲಿ ತಂಡಕ್ಕೆ ಗೆಲುವು ತಂದುಕೊಡಲಾಗದೆ ಹತಾಶೆಯಲ್ಲಿ ನಿವೃತ್ತಿ ಪಡೆಯುವದಲ್ಲಿ ಹೇಳಿದ್ದ ಫುಟ್ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ ಸದ್ಯ ನಿವೃತ್ತಿಯಿಂದ ಹಿಂದೆ ಸರಿಯಲಿದ್ದಾರೆ. ಆದರೂ ವಿಶ್ವಕಪ್ ನಲ್ಲಿ ತಂಡದಲ್ಲಿ ಕಾಣಿಸಿಕೊಳ್ಳುವುದು ಅನುಮಾನ.

ಮುಂಬರುವ 2018ರ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಕ್ಕೆ ಲಿಯೊನೆಲ್ ಮೆಸ್ಸಿ ಅಲಭ್ಯವಾಗಲಿದ್ದಾರೆ. ಮೆಸ್ಸಿ ಅರ್ಜೆಂಟೀನ ತಂಡವನ್ನು ಸೇರಿಕೊಳ್ಳಲು ತೆರಳಲಿದ್ದಾರೆ. ಆದರೆ, ಅವರು ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾಗವಹಿಸುವುದು ಅವರ ಗಾಯ ಗುಣಮುಖವಾಗುವುದನ್ನು ಅವಲಂಬಿಸಿರುತ್ತದೆ ಎನ್ನಲಾಗಿದೆ.

ವೈದ್ಯಕೀಯ ವರದಿ ಮೆಸ್ಸಿ ಗಾಯವನ್ನು ಖಚಿತಪಡಿಸಿದ್ದು, ವೈದ್ಯಕೀಯ ಸಿಬ್ಬಂದಿ ಹಾಗೂ ಅರ್ಜೆಂಟೀನ ಫುಟ್ಬಾಲ್ ಫೆಡರೇಶನ್ ಮೆಸ್ಸಿ ಫಿಟ್ ಇಲ್ಲ ಎನ್ನುವುದನ್ನು ದೃಢಪಡಿಸಿವೆ ಎಂದು ಬಾರ್ಸಿಲೋನ ಕ್ಲಬ್ ತಿಳಿಸಿದೆ. ಸ್ಪೇನೀಶ್ ಲೀಗ್​ನಲ್ಲಿ ಅಟ್ಲೆಟಿಕ್ ಬಿಲ್ಬಾವೊ ವಿರುದ್ಧ ಪಂದ್ಯದ ಬಳಿಕ ಮೆಸ್ಸಿ ಗಾಯದ ಸಮಸ್ಯೆಗೆ ತುತ್ತಾಗಿದ್ದರು.