ಬೆಂಗಳೂರು[ಜೂ. 03]  ಇನ್ನು ಮುಂದೆ ಬ್ಯಾಂಕ್ ಗಳು ಎಲ್ಲ ಶನಿವಾರದಂದೂ ಮುಚ್ಚಿರುತ್ತವೆ ಎಂಬ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಓಡಾಡಿದೆ.

ಆದರೆ ಈ ಸುದ್ದಿ ಯಾವ ಮೂಲದಿಂದ ಹುಟ್ಟಿಕೊಂಡಿತು ಎಂಬುದು ಮಾತ್ರ ಪತ್ತೆ ಆಗಿಲ್ಲ. ಅಷ್ಟಕ್ಕೂ ಸತ್ಯಾಸತ್ಯತೆ ಪರಿಶೀಲನೆ ಮಾಡಿದಾಗ ಸಾಕಷ್ಟು ಸಂಗತಿಗಳು ಹೊರಬಂದವು.

ಡ್ರಾ ಮಾಡಿದ ಹಣ ಬರದಿದ್ದರೆ ಪರಿಹಾರ: ಆರ್‌ಬಿಐ ನೀತಿ!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ರಜೆಗೆ ನಿರ್ದೇಶನ ನೀಡಿತ್ತು ಎಂದು ನೆಟ್ಟಿಗರು ಹಂಚಿಕೊಂಡಿದ್ದರು. ಆದರೆ RBI ನಿಂದ ರಜೆ ನೀಡುವುದಕ್ಕೆ ಸಂಬಂಧಿಸಿ ಯಾವ ನೋಟಿಫಿಕೇಶನ್ ಇಲ್ಲ. ಅಂದರೆ ಅಲ್ಲಿಗೆ ಅಧಿಕೃತವಾದ ಸುದ್ದಿ ಇದಲ್ಲ ಎಂಬುದು ಗೊತ್ತಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಜೋರಾಗುತ್ತಿದ್ದಂತೆ ಕೆಲ ಮಾಧ್ಯಮಗಳು ಸಹ ಇದೇ ಸತ್ಯ ಎಂದು ಭಾವಿಸಿ ವರದಿ ಮಾಡಿದ್ದವು.