ಎಂಇಎಸ್ ಪುಂಡರ ಅಹಂಕಾರ ಕಡಿಮೆ ಆಗಿಲ್ಲ. ಪೊಲೀಸರು ಬಂಧಿಸಿದರೂ ಪೊಲೀಸ್ ವಾಹನದಲ್ಲೇ ಮೀಸೆ ತಿರುವಿದ ಪ್ರಸಂಗ ನಡೆದಿದೆ.

ಬೆಳಗಾವಿ(ನ.04): ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ಮೇರೆ ಮೀರಿದೆ. ಕನ್ನಡ ರಾಜ್ಯೋತ್ಸವದಂದು ನಾಡದ್ರೋಹಿ ಚಟುವಟಿಕೆ ನಡೆಸಿದ ಬೆಳಗಾವಿ ಮೇಯರ್‌ ಸರೀತಾ ಪಾಟೀಲ್ ಅಣಕು ಶವಯಾತ್ರೆ ನಡೆಸಿ ಕನ್ನಡಪರ ಹೋರಾಟಗಾರರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇತ್ತ ಬೆಳಗಾವಿ ಪೊಲೀಸರು ಸಹ 37 ಜನರನ್ನ ಬಂಧಿಸುವ ಮೂಲಕ ಎಂಇಎಸ್‌ ಮುಖಂಡರಿಗೆ ಬಿಸಿ ಮುಟ್ಟಿಸಿದರು.

ಇಷ್ಟಾದರೂ ಎಂಇಎಸ್ ಪುಂಡರ ಅಹಂಕಾರ ಕಡಿಮೆ ಆಗಿಲ್ಲ. ಪೊಲೀಸರು ಬಂಧಿಸಿದರೂ ಪೊಲೀಸ್ ವಾಹನದಲ್ಲೇ ಮೀಸೆ ತಿರುವಿದ ಪ್ರಸಂಗ ನಡೆದಿದೆ.