ಮಹಾರಾಷ್ಟ್ರ ಸರ್ಕಾರ ಮಹದಾಯಿ ಯೋಜನೆಗೆ ಒಪ್ಪಿಗೆ ಸೂಚಿಸಬಾರದು ಎಂದು ಮಹಾ ಸಿಎಂ ದೇವೇಂದ್ರ ಫಡ್ನಾವೀಸಾಗೆ ಬೆಳಗಾವಿ ಮರಾಠಾ ಯುವಮಂಚ್ ಅಧ್ಯಕ್ಷ ಸೂರಜ್ ಕಣಬರಕರ ಪತ್ರ ಬರೆದಿದ್ದಾರೆ.
ಬೆಳಗಾವಿ(ಡಿ.27): ಮಹದಾಯಿ ವಿಚಾರದಲ್ಲೂ ಎಂಇಎಸ್ ಕ್ಯಾತೆ ತೆಗೆದಿದೆ. ಗಡಿ ವಿವಾದದಲ್ಲಿ ಸದಾ ಮೂಗು ತೂರಿಸುತ್ತಿದ್ದ ಎಂಇಎಸ್ ನಾಯಕರು ಮಹದಾಯಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಮುಂದಾಗಿದ್ದಾರೆ.
ಹೌದು, ಮಹಾರಾಷ್ಟ್ರ ಸರ್ಕಾರ ಮಹದಾಯಿ ಯೋಜನೆಗೆ ಒಪ್ಪಿಗೆ ಸೂಚಿಸಬಾರದು ಎಂದು ಮಹಾ ಸಿಎಂ ದೇವೇಂದ್ರ ಫಡ್ನಾವೀಸಾಗೆ ಬೆಳಗಾವಿ ಮರಾಠಾ ಯುವಮಂಚ್ ಅಧ್ಯಕ್ಷ ಸೂರಜ್ ಕಣಬರಕರ ಪತ್ರ ಬರೆದಿದ್ದಾರೆ.
ಮಹಾಜನ ಆಯೋಗದ ವರದಿ ಪ್ರಕಾರ ಕಳಸಾ ಬಂಡೂರಿ ನಾಲಾ ಪ್ರದೇಶ ಮಹಾರಾಷ್ಟಕ್ಕೆ ಸೇರುತ್ತದೆ. ಮಹಾದಾಯಿ ವಿಚಾರವಾಗಿ ಮೂರು ರಾಜ್ಯಗಳ ಸಿಎಂಗಳ ಸಭೆ ನಡೆದರೆ ಗಡಿ ವಿವಾದ ಬಗೆಹರಿಯಲಿದೆ ಎಂದು ಮಹಾರಾಷ್ಟ್ರ ಸಿಎಂಗೆ ಪತ್ರದಲ್ಲಿ ಒತ್ತಾಯಮಾಡಲಾಗಿದೆ.
