ಕ್ರಿಸ್ಮಸ್ ಸಂಭ್ರಮದಲ್ಲಿದ್ದ ಬರ್ಲಿನ್ ಮಾರ್ಕೆಟ್’ಗೆ ಸೋಮವಾರದಂದು ಟ್ರಕ್ಕೊಂದು ಏಕಾಏಕಿ ನುಗ್ಗಿದ್ದು, 12 ಮಂದಿಯನ್ನು ಬಲಿಪಡೆದಿದ್ದು, 48 ಮಂದಿ ಗಾಯಗೊಂಡಿದ್ದಾರೆ.

ಬರ್ಲಿನ್(ಡಿ.20): ದೊಡ್ಡ ಟ್ರಕ್ ಒಂದು ಏಕಾಏಕಿ ಕ್ರಿಸ್ಮಸ್ ಮಾರುಕಟ್ಟೆಗೆ ನುಗ್ಗಿ, 12 ಜೀವಗಳನ್ನು ಬಲಿಪಡೆದಿರುವ ಘಟನೆಯು ಭಯೋತ್ಪಾದನಾ ಕೃತ್ಯವೆಂದು ಜರ್ಮನಿಯ ಭದ್ರತಾ ಸಂಸ್ಥೆಗಳು ಹೇಳಿವೆ.

ಕ್ರಿಸ್ಮಸ್ ಸಂಭ್ರಮದಲ್ಲಿದ್ದ ಬರ್ಲಿನ್ ಮಾರ್ಕೆಟ್’ಗೆ ಸೋಮವಾರದಂದು ಟ್ರಕ್ಕೊಂದು ಏಕಾಏಕಿ ನುಗ್ಗಿದ್ದು, 12 ಮಂದಿಯನ್ನು ಬಲಿಪಡೆದಿದ್ದು, 48 ಮಂದಿ ಗಾಯಗೊಂಡಿದ್ದಾರೆ.

23 ವರ್ಷ ಪ್ರಾಯದ ಆರೋಪಿ ಟ್ರಕ್ ಚಾಲಕ ಪಾಕಿಸ್ತಾನದಿಂದ ವಲಸೆಬಂದಿದ್ದು ಹಿಂದೆ ಸಣ್ಣಪುಟ್ಟ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದನೆಂದು ಪೊಲೀಸರು ಹೇಳಿದ್ದಾರೆ.

ಘಟನೆಯ ಬಗ್ಗೆ ಹೆಚ್ಚಿನ ಖಚಿತ ಮಾಹಿತಿ ಇನ್ನೂ ತಿಳಿಯಬೇಕಷ್ಟೇ, ಆದರೆ ಇದೊಂದು ಉದ್ದೇಶಪೂರ್ವಕ ಭಯೋತ್ಪಾದನಾ ಕೃತ್ಯವಾಗಿರಬಹುದೆಂದು ಜರ್ಮನಿ ಚಾನ್ಸೆಲ್ಲರ್ ಎಂಜೆಲಾ ಮರ್ಕೆಲ್ ಹೇಳಿದ್ದಾರೆ.