ಜಿಎಸ್​ಟಿ ಜಾರಿಯಾಗಿ ಒಂದು ತಿಂಗಳು ಕಳೆದು ಹೋಯ್ತು. ಆರಂಭದಲ್ಲಿ ಅರ್ಥವಾಗದೆ ಗೊಂದಲದ ಗೋಪುರವಾಗಿದ್ದ ಜಿಎಸ್​ಟಿ, ನಂತರ ಸ್ವಲ್ಪ ಸ್ವಲ್ಪವೇ ಅರ್ಥವಾಗತೊಡಗಿದೆ. ನಾವು ಕಟ್ಟುವ ಹಣ ದೇಶದ ಬೊಕ್ಕಸಕ್ಕೆ ಹೋಗಲಿದೆ ಎಂದು ಅರ್ಥವಾದ ಮೇಲೆ ಜನರೂ ಸಹಕಾರ ನೀಡತೊಡಗಿದ್ದಾರೆ. GST ಜಾರಿಗೆ ಬಂದ ನಂತರ, ದೇಶದ ತೆರಿಗೆ ವ್ಯವಸ್ಥೆ ಬದಲಾಗಲಿದೆ. ಸರ್ಕಾರದ ಬೊಕ್ಕಸಕ್ಕೆ ಬರದೇ ನುಸುಳಿ ಹೋಗುತ್ತಿದ್ದ ಹಳೆಯ ವ್ಯವಸ್ಥೆಗೆ ಬ್ರೇಕ್ ಬೀಳಲಿದೆ ಎಂದೆಲ್ಲ ನಿರೀಕ್ಷಿಸಲಾಗಿತ್ತು. ಇಂಥಾದ್ದೊಂದು ವ್ಯವಸ್ಥೆ ಜಾರಿ ಮಾಡಿ, ಕೇಂದ್ರ ಸರ್ಕಾರ ದೇಶ ಕಟ್ಟುವ ಕನಸು ಕಾಣುತ್ತಿದ್ದರೆ, ವರ್ತಕರು ರಂಗೋಲಿ ಕೆಳಗೆ ನುಸುಳಿ, ದೇಶಕ್ಕೇ ಮೋಸ ಮಾಡುತ್ತಿದ್ದಾರೆ.

ನವದೆಹಲಿ(ಆ.01): ಜಿಎಸ್​ಟಿ ಜಾರಿಯಾಗಿ ಒಂದು ತಿಂಗಳು ಕಳೆದು ಹೋಯ್ತು. ಆರಂಭದಲ್ಲಿ ಅರ್ಥವಾಗದೆ ಗೊಂದಲದ ಗೋಪುರವಾಗಿದ್ದ ಜಿಎಸ್​ಟಿ, ನಂತರ ಸ್ವಲ್ಪ ಸ್ವಲ್ಪವೇ ಅರ್ಥವಾಗತೊಡಗಿದೆ. ನಾವು ಕಟ್ಟುವ ಹಣ ದೇಶದ ಬೊಕ್ಕಸಕ್ಕೆ ಹೋಗಲಿದೆ ಎಂದು ಅರ್ಥವಾದ ಮೇಲೆ ಜನರೂ ಸಹಕಾರ ನೀಡತೊಡಗಿದ್ದಾರೆ. GST ಜಾರಿಗೆ ಬಂದ ನಂತರ, ದೇಶದ ತೆರಿಗೆ ವ್ಯವಸ್ಥೆ ಬದಲಾಗಲಿದೆ. ಸರ್ಕಾರದ ಬೊಕ್ಕಸಕ್ಕೆ ಬರದೇ ನುಸುಳಿ ಹೋಗುತ್ತಿದ್ದ ಹಳೆಯ ವ್ಯವಸ್ಥೆಗೆ ಬ್ರೇಕ್ ಬೀಳಲಿದೆ ಎಂದೆಲ್ಲ ನಿರೀಕ್ಷಿಸಲಾಗಿತ್ತು. ಇಂಥಾದ್ದೊಂದು ವ್ಯವಸ್ಥೆ ಜಾರಿ ಮಾಡಿ, ಕೇಂದ್ರ ಸರ್ಕಾರ ದೇಶ ಕಟ್ಟುವ ಕನಸು ಕಾಣುತ್ತಿದ್ದರೆ, ವರ್ತಕರು ರಂಗೋಲಿ ಕೆಳಗೆ ನುಸುಳಿ, ದೇಶಕ್ಕೇ ಮೋಸ ಮಾಡುತ್ತಿದ್ದಾರೆ.

ದೇಶಕ್ಕೆ ಮೋಸ.. ನಮೋ ಆಶಯಕ್ಕೆ ನಾಮ..! 

ವರ್ತಕರು ಜಿಎಸ್​ಟಿ ಎಂಬ ಕಠಿಣ ವ್ಯವಸ್ಥೆಯನ್ನೂ ಗಾಳಿಗೆ ತೂರಿ, ಹೇಗೆಲ್ಲ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ ಎಂಬುದು ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಇದಕ್ಕಾಗಿ ಸುವರ್ಣ ನ್ಯೂಸ್ ಮಾಡಿದ್ದು ಇಷ್ಟೆ. ನಮಗೆ ಕೆಲವು ವಸ್ತುಗಳು ಬೇಕು ಎಂದು ಗ್ರಾಹಕರಂತೆ, ಬೆಂಗಳೂರಿನ ಕೆಲವು ವ್ಯಾಪಾರಿ ಮಳಿಗೆಗಳಿಗೆ ಭೇಟಿ ಕೊಟ್ಟಿದ್ದು.

ಬಿಲ್ ಕೊಟ್ರೆ ಟ್ಯಾಕ್ಸು.. ಬಿಲ್ಲೇ ಕೊಡದಿದ್ದರೆ..: ಜಿಎಸ್​ಟಿ ರಿಯಾಲಿಟಿ ಚೆಕ್ - ಚಿಕ್ಕಪೇಟೆ

ಮಾಲೀಕ: ಏನು ಬೇಕು ?

ಸುವರ್ಣ ನ್ಯೂಸ್: ನಮಗೆ ಲಗೇಜ್ ಬ್ಯಾಗ್ ಬೇಕು. ಎಷ್ಟೆಷ್ಟರದ್ದು ಇವೆ..?

ಮಾಲೀಕ: ಒಳ್ಳೆಯ ಕ್ವಾಲಿಟಿ ಇರುವ ಬ್ಯಾಗ್ ಸಾವಿರದ ಮೇಲು ಪಟ್ಟು ಇದೆ.

ಸುವರ್ಣ ನ್ಯೂಸ್: ಓಕೆ, ನಮಗೆ ಅಂಥದ್ದೇ ಕೊಡಿ.

ಮಾಲೀಕ: ಇದು 1950 ರೂ. ಲಗೇಜ್ ಬ್ಯಾಗ್

ಸುವರ್ಣ ನ್ಯೂಸ್: ಇದಕ್ಕೆ ಬಿಲ್ ಕೊಡ್ತೀರಾ..? ಜಿಎಸ್ ಟಿ ಹಾಕಿದ್ರೆ ಎಷ್ಟು,..?

ಮಾಲೀಕ: ಜಿಎಸ್​ಟಿ ಬಿಲ್ ನೀಡಲು ಆಗಲ್ಲ. ಅದರಿಂದ ರೇಟ್ ಜಾಸ್ತಿ ಆಗುತ್ತೆ.

ಮಾಲೀಕ: ಗ್ಯಾಲಕ್ಸಿ ಕಂಪೆನಿಯ ಬ್ಯಾಗ್. ಇದರ ಬೆಲೆ 4340 ರೂ. ನೀವು ಕೇಳಿದ್ದೀರ ಅಂತಾ 1950 ರೂ.ಗೆ ಕೊಡ್ತೇನೆ. ಇಲ್ಲೆಲ್ಲವೂ ವಿತೌಟ್ ಬಿಲ್ಲೇ ಸಿಗೋದು. ಹಳೆಯ ಸ್ಟಾಕ್​ಗಳು ಸೇಲ್ ಆಗಬೇಕಲ್ಲ. ನಾವು ಕೂಡಾ ಬಿಲ್ ಇಲ್ಲದೆ ವಸ್ತುಗಳನ್ನು ಖರೀದಿ ಮಾಡೋದು.ಅದ್ರಿಂದ ನಿಮಗೆ ಹೇಗೆ ನೀಡೋಕೆ ಆಗುತ್ತೆ.

ಸುವರ್ಣ ನ್ಯೂಸ್: ಹೌದಾ. ಬಿಲ್ ಇಲ್ಲದೆ ನೀಡಿದ್ರೆ ವಾರಂಟಿ ಸಿಗಲ್ಲ. ಡ್ಯಾಮೇಜ್ ಆದ್ರೆ ವಾಪಸ್ಸು ಮಾಡೋಕೆ ಆಗಲ್ಲ.

ಮಾಲೀಕ: ಅದರಲ್ಲೇನು ಪ್ರಾಬ್ಲಂ ಇಲ್ಲ. ಏನಾದ್ರೂ ಡ್ಯಾಮೇಜ್ ಬಂದ್ರೆ ರಿಪ್ಲೇಸ್ ಮಾಡಿಕೊಡ್ತೇವೆ.

ಜಿಎಸ್​ಟಿ ಬೇಕಂದ್ರೆ ಬಿಲ್.. ಬೇಡ ಅಂದ್ರೂ ಓಕೆ..!: ಜಿಎಸ್​ಟಿ ರಿಯಾಲಿಟಿ ಚೆಕ್ -ಅವೆನ್ಯೂ ರಸ್ತೆ

ಸುವರ್ಣ ನ್ಯೂಸ್: ನಮಗೆ ಕುಕ್ಕರ್ ಬೇಕು

ಅಂಗಡಿ ಮಾಲೀಕ: ಎಷ್ಟು ಲೀಟರ್? ಯಾವ ಕಂಪೆನೀದು?

ಸುವರ್ಣ ನ್ಯೂಸ್: ಅಂದಾಜು 12 ಲೀಟರ್. ಒಳ್ಳೆಯ ಕಂಪೆನಿಯದ್ದೇ ಕೊಡಿ.

ಮಾಲೀಕ: ಪ್ರೆಸ್ಟೀಜ್ ಕಂಪೆನೀದು ಇದೆ.

ಸುವರ್ಣ ನ್ಯೂಸ್: ಎಷ್ಟು ಆಗುತ್ತೆ..?

ಮಾಲೀಕ: 790 ರೂ. ಆಗುತ್ತೆ.

ಸುವರ್ಣ ನ್ಯೂಸ್: ಬಿಲ್ ಸಿಗುತ್ತಾ...?

ಮಾಲೀಕ: ಕುಕ್ಕರ್​​ಗೆ ಜಿಎಸ್​ಟಿ 12 %. ಜಿಎಸ್ ಟಿ ಹಾಕಿದ್ರೆ 885 ರೂ. ಆಗುತ್ತೆ.

ಸುವರ್ಣ ನ್ಯೂಸ್: ಹೌದಾ..? ಜಿಎಸ್​ಟಿ ಇಲ್ಲದಿದ್ದರೆ ?

ಮಾಲೀಕ: ಜಿಎಸ್​ಟಿ ಇಲ್ಲದೇ ಇದ್ರೆ ವಿತೌಟ್ ಬಿಲ್ ಕೊಡ್ತೇವೆ. ಆಗ ಕೇವಲ 790 ರೂ. ನೀಡಿದ್ರೆ ಸಾಕು. ಹಳೆಯ ವಸ್ತುಗಳೆಲ್ಲಾ ರಿಪ್ಲೇಸ್ ಮಾಡುತ್ತಿದ್ದೇವೆ. ಅವುಗಳಿಗೆ ಜಿಎಸ್​ಟಿ ಹಾಕದೆ, ಬಿಲ್ ಇಲ್ಲದೆ ಕೊಡ್ತೇನೆ. ಅದನ್ನೆಲ್ಲ ನಾವು ಮ್ಯಾನೇಜ್ ಮಾಡುತ್ತೇವೆ.

ಸುವರ್ಣ ನ್ಯೂಸ್: ಆ ಮೇಲೆ ಡ್ಯಾಮೇಜ್ ಬಂದ್ರೆ ಏನು ಮಾಡೋದು..?

ಮಾಲೀಕ: ಅದ್ರಿಂದ ನಿಮಗೆ ಯಾವುದೇ ತೊಂದ್ರೆ ಇಲ್ಲ. ನಮ್ಮ ಅಂಗಡಿ ವಿಳಾಸ, ವಾರಂಟಿ ಕಾರ್ಡ್ ಎಲ್ಲಾ ನೀಡ್ತೇವೆಲ್ಲ.

ಪ್ರೆಸ್ಟೀಜ್​ನಂತಹ ಕಂಪೆನಿಯ ಕುಕ್ಕರ್ ಕೂಡಾ ಬಿಲ್ ಇಲ್ಲದೆ ಕೊಡಬಹುದು ಅಂದ್ರೆ, ಪರಿಸ್ಥಿತಿ ಅದೆಷ್ಟು ಹದಗೆಟ್ಟಿರಬೇಕು..? ಅದಾದ ಮೇಲೆ ಬಳೆಪೇಟೆ, ಬಿ.ವಿ.ಕೆ.ಅಯ್ಯಂಗಾರ್ ರಸ್ತೆಯಲ್ಲಿರುವ ಬಟ್ಟೆ ಅಂಗಡಿಗಳಲ್ಲೂ ರಿಯಾಲಿಟಿ ಚೆಕ್ ನಡೆಸಿದ್ವು. ಅಲ್ಲೂ ಇದೇ ರೀತಿಗ್ರಾಹಕರಿಗೆ ವಂಚಿಸುತ್ತಿರೋದು ಬೆಳಕಿಗೆ ಬಂತು. ಎಂಆರ್​ಪಿ ಇಲ್ಲದೆ ಮನಸೋ ಇಚ್ಚೆ ರೇಟು ಹಾಕಿ ಮಾರಾಟ ಮಾಡ್ತಿರೋದು ಗೊತ್ತಾಯ್ತು.

ಬಿಲ್ ಬೇಕಾ..? ಜಾಸ್ತಿ ದುಡ್ಡು ಕೊಡಿ: ಜಿಎಸ್​ಟಿ ರಿಯಾಲಿಟಿ ಚೆಕ್ : ಬಿವಿಕೆ ಅಯ್ಯಂಗಾರ್ ರಸ್ತೆ

ಸುವರ್ಣ ನ್ಯೂಸ್: ಬ್ರಾಂಡೆಡ್ ಜಾಕೆಟ್ ಇದ್ಯಾ?

ಮಾಲೀಕ: ಇಲ್ಲಿ ಬ್ರಾಂಡೆಡ್ ಸಿಗೋದಿಲ್ಲ. ಎಲ್ಲ 2 ಸಾವಿರ ರೂ ಮೇಲ್ಪಟ್ಟಿರುತ್ವೆ. ಬ್ರಾಂಡೆಡ್ ಬೇಕಾದ್ರೆ ಗಾಂಧಿ ನಗರಕ್ಕೆ ಹೋಗಬೇಕು. 850 ರೂ. ರೇಂಜ್​ನಲ್ಲಿ ಒಳ್ಳೆಯ ಜಾಕೆಟ್​ಗಳಿವೆ.

ಸುವರ್ಣ ನ್ಯೂಸ್: ಈ ಜಾಕೆಟ್​ಗೆ ಟ್ಯಾಕ್ಸ್ , ಜಿಎಸ್​ಟಿ ಹಾಕ್ತೀರಾ...?

ಮಾಲೀಕ: ಹೋಲ್ ಸೇಲ್ ಮಾರಾಟದ ವಸ್ತುಗಳಿಗೆ ಜಿಎಸ್​ಟಿ ಇಲ್ಲ. ಬಿಲ್ ಸಿಗಲ್ಲ. ಬಿಲ್ ಬೇಕಾದ್ರೆ 5 % ಜಾಸ್ತಿ ಕೊಡಬೇಕು. 40-45 ರೂ. ಎಕ್ಸ್​ಟ್ರಾ ಕೊಡಬೇಕು.

ಸುವರ್ಣ ನ್ಯೂಸ್: ಜಿಎಸ್​ಟಿ ಹಾಕಿಯೇ ಬಿಲ್ ಕೊಡ್ತೀರಾ..?

ಮಾಲೀಕ: ಬೇಕು ಅಂದ್ರೆ ಕೊಡ್ತೇವೆ. ಗ್ರಾಹಕರಿಗೆ ಬೇಕಾದ ಹಾಗೆ ಕೊಡ್ತೇವೆ.

ಇದು ಸಮಸ್ಯೆ, ಸರ್ಕಾರ ಏನೇ ಕಟ್ಟುನಿಟ್ಟಾಗಿ ಜಿಎಸ್​ಟಿ ಜಾರಿಗೆ ತಂದ್ರೂ, ವರ್ತಕರು ರಂಗೋಲಿ ಕೆಳಗೆ ನುಗ್ಗೋರು ನುಗ್ತಾನೇ ಇರ್ತಾರೆ. ಸರ್ಕಾರ ಇದರ ಬಗ್ಗೆ ಎಚ್ಚೆತ್ತುಕೊಂಡು ಒಂದ್ಸಲ ಬಿಸಿ ಮುಟ್ಟಿಸ್ದೇ ಹೋದ್ರೆ, ಇದು ಕಂಟ್ರೋಲ್​ಗೆ ಬರಲ್ಲ.