ಪುನೀತ್ ಪಕ್ಕಾ ಅಭಿಮಾನಿಗಳಾದ ಇಬ್ಬರು ವಿಶೇಷ ಚೇತನ ಮಕ್ಕಳಿಗೆ ಅಪ್ಪು ಕಾಣುವ ಹೆಬ್ಬಯಕೆ

First Published 16, Mar 2018, 12:38 PM IST
Mentally Retired Kid Wishes To Meet Power Star
Highlights

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದರೆ ಈ ಇಬ್ಬರು ವಿಶೇಷ  ಚೇತನರಿಗೆ ಅಚ್ಚುಮೆಚ್ಚು. ತಮ್ಮ ನೆಚ್ಚಿನ ನಟರಾದ ಪುನೀತ್ ನೋಡಲು ಇವರಿಗೆ ಎಲ್ಲಿಲ್ಲದ ಕಾತುರ.  ಕಾತುರದಲ್ಲಿ ಅದೆಷ್ಟೋ ವರ್ಷಗಳಿಂದಲೂ ಕೂಡ ಕಾಯುತ್ತಿದ್ದಾರೆ.

ತುಮಕೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದರೆ ಈ ಇಬ್ಬರು ವಿಶೇಷ  ಚೇತನರಿಗೆ ಅಚ್ಚುಮೆಚ್ಚು. ತಮ್ಮ ನೆಚ್ಚಿನ ನಟರಾದ ಪುನೀತ್ ನೋಡಲು ಇವರಿಗೆ ಎಲ್ಲಿಲ್ಲದ ಕಾತುರ.  ಕಾತುರದಲ್ಲಿ ಅದೆಷ್ಟೋ ವರ್ಷಗಳಿಂದಲೂ ಕೂಡ ಕಾಯುತ್ತಿದ್ದಾರೆ.

ತುಮಕೂರು ಜಿಲ್ಲೆ ತಿಪಟೂರಿನ ಇಬ್ಬರು ಅಂಗವಿಕಲ ಸಹೋದರ ಹಾಗೂ ಸಹೋದರಿಯರಿಗೆ ಪುನೀತ್ ನೋಡುವ ಬಯಕೆ ದಿನದಿನಕ್ಕೂ ಹೆಚ್ಚುತ್ತಲೆ ಇದೆ.

ಹುಟ್ಟಿದ ವೇಳೆ ಎಲ್ಲರಂತೆ ಚೆನ್ನಾಗಿಯೇ ಇದ್ದ ಶೃತಿ ಹಾಗೂ ತೇಜಸ್ ನಾಲ್ಕನೇ ತರಗತಿ ನಂತರ ಅಂಗವೈಕಲ್ಯಕ್ಕೆ  ತುತ್ತಾದರು. ತಿಪಟೂರಿನಲ್ಲಿ ಪೇಂಟಿಂಗ್ ಕೆಲಸ ಮಾಡುವ ರಾಜಶೇಖರ್ ಹಾಗೂ ಜಯಮ್ಮ ದಂಪತಿ ಮಕ್ಕಳಾದ ಇಬ್ಬರೂ ಕೂಡ ಪುನೀತ್ ಅವರ ದೊಡ್ಡ ಅಭಿಮಾನಿಗಳು.

ಈ ಬಗ್ಗೆ ಮಾತನಾಡುವ ಅವರ ತಂದೆ ತಾಯಿ  ತಮ್ಮ ಮಕ್ಕಳ ನೋವು ಮರೆಸಿ ಖುಷಿ ನೀಡಿದ್ದು, ಪುನೀತ್ ರಾಜ್ ಕುಮಾರ್ ಅವರು. ಹಾಸಿಗೆಯಿಂದ ಎದ್ದು ನಡೆದಾಡಲೂ ಆಗದ ಸ್ಥಿತಿ ಇದ್ದ  ಇಬ್ಬರಿಗೆ ಪುನೀತ್ ಚಿತ್ರಗಳನ್ನು ತೋರಿಸಲೇಬೇಕು. ಟಿವಿಯಲ್ಲಿ ಪುನೀತ್ ಕಂಡರೆ ರೆಪ್ಪೆ ಮಿಟುಕಿಸದೇ ನೋಡಿ ಆನಂದಿಸುತ್ತಾರೆ.

ಕಿತ್ತು ತಿನ್ನುವ ಬಡತನ  ಇರುವುದರಿಂದ  ಇಬ್ಬರನ್ನು ಪುನೀತ್ ಭೇಟಿಗೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ. ಆದಷ್ಟು ಬೇಗ  ಈ ಮಕ್ಕಳ ಬಯಕೆ ಈಡೇರಲಿ ಎನ್ನುವುದೇ ನಮ್ಮ ಹಾರೈಕೆಯಾಗಿದೆ.

loader