11 ವರ್ಷಗಳಿಂದ ಶಿವಮೊಗ್ಗದ ಮೆಗ್ಗಾನ ಆಸ್ಪತ್ರೆಯಲ್ಲಿ ಮನೆ ಮಗನಂತಿದ್ದ ಜವರೇಗೌಡ ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯಿಂದಾಗಿ ರಾಮನಗರ ಜಿಲ್ಲೆಯಲ್ಲಿರುವ ತಮ್ಮ ಹೆತ್ತವರ ಮನೆ ಸೇರಿದ್ದ. ಆದರೆ ಹೆತ್ತವರೇ ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಮಗನನ್ನು ಹೊರಹಾಕಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗ(ಅ.30): 11 ವರ್ಷಗಳಿಂದ ಶಿವಮೊಗ್ಗದ ಮೆಗ್ಗಾನ ಆಸ್ಪತ್ರೆಯಲ್ಲಿ ಮನೆ ಮಗನಂತಿದ್ದ ಜವರೇಗೌಡ ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿಯಿಂದಾಗಿ ರಾಮನಗರ ಜಿಲ್ಲೆಯಲ್ಲಿರುವ ತಮ್ಮ ಹೆತ್ತವರ ಮನೆ ಸೇರಿದ್ದ. ಆದರೆ ಹೆತ್ತವರೇ ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಂಡು ಮಗನನ್ನು ಹೊರಹಾಕಿದ್ದಾರೆ ಎನ್ನಲಾಗಿದೆ.
ಮೆಗ್ಗಾನ ಆಸ್ಪತ್ರೆಯಲ್ಲಿ 11 ವರ್ಷಗಳಿಂದ ಇದ್ದ ಜವರೇಗೌಡ ಎಂಬ ಯುವಕನ ಕುರಿತು ಸುವರ್ಣನ್ಯೂಸ್ ದೇವರ ಮಗ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿತ್ತು. ಇದನ್ನು ಗಮನಿಸಿದ ರಾಮನಗರ ಚನ್ನಪಟ್ಟಣ ತಾಲೂಕಿನ ಶಿವಣ್ಣ , ರತ್ಮಮ್ಮ ದಂಪತಿ ತನ್ನ ಮಗನೆಂದು ಕರೆದುಕೊಂಡು ಹೋಗಿದ್ದರು. ಈ ದಂಪತಿ ಮೂರು ಮಕ್ಕಳ ಪೈಕಿ ಹಿರಿಯ ಮಗ ಜವರೇಗೌಡ. ಆದ್ರೆ ಮನೆ ಕರೆದುಕೊಂಡು ಹೋಗಿದ್ದ ಈ ದಂಪತಿ ಆಸ್ತಿ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಹೊರ ಹಾಕಿದ್ದಾರೆ. ಮಾತನಾಡಲು ಬರದ ಈತನನ್ನು ಸಾಕುವವರು ಯಾರು ಎಂದು ಪೋಷಕರೇ ಮನೆಯಿಂದ ಮತ್ತೆ ಹೊರ ಹಾಕಿದ್ದಾರೆ.
ಮನೆಯಿಂದ ಹೊರಬಿದ್ದ ಈತ ಊರೂರು ಅಲೆದಿದ್ದಾನೆ. ಚಿತ್ರದುರ್ಗ ಹೊಳಲ್ಕೆರೆ ಯಾರೋ ಹೊಡೆಯುತ್ತಿದ್ದಾಗ ಈತನ ಪರಿಚಯವಿದ್ದ ಚಾಲಕನೊಬ್ಬ ಮತ್ತೆ ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ಸೇರಿಸಿದ್ದಾನೆ.
