ಪ್ರತಿ ತಿಂಗಳು ಋತುಚಕ್ರದ ರಜೆ ಸ್ಯಾಂಕ್ಷನ್ ಮಾಡಿದರೆ, ಪುರುಷರಿಗಿಂತ ಚಾಣಾಕ್ಷರಾಗಿ ಕೆಲಸ ಮಾಡ್ತಾರಂತೆ.

ಬಾಸ್‌ಗಳು ಓದಬಾರ್ದು, ಮಹಿಳಾ ಉದ್ಯೋಗಿಗಳೆಲ್ಲ ಓದ್ಲೇಬೇಕಾದ ಸಂಗತಿಯಿದು! ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಋತುಚಕ್ರದ ರಜೆ ಸ್ಯಾಂಕ್ಷನ್ ಮಾಡಿದರೆ, ಪುರುಷರಿಗಿಂತ ಚಾಣಾಕ್ಷರಾಗಿ ಕೆಲಸ ಮಾಡ್ತಾರಂತೆ. ‘ದಿ ಸನ್’ ಪತ್ರಿಕೆ ನಡೆಸಿದ ಸರ್ವೆಯಲ್ಲಿ ಈ ಸಂಗತಿ ಗೊತ್ತಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸರ್ವೆಯಲ್ಲಿ ಪಾಲ್ಗೊಂಡಿದ್ದ ವಿಶ್ವದ 1000 ಮಹಿಳೆಯರಲ್ಲಿ ಶೇ.52 ಮಂದಿ ಋತುಚಕ್ರದ ಯಾತನೆಯನ್ನೂ, ಕೆಲಸದ ಹೊರೆಯನ್ನು ಒಟ್ಟೊಟ್ಟಿಗೆ ನಿಭಾಯಿಸುವುದು ಕಷ್ಟ ಎಂದಿದ್ದಾರೆ. ಋತುಚಕ್ರದ ವೇಳೆ ಕಡ್ಡಾಯವಾಗಿ ರಜೆ ಪಡೆದು, ಬಳಿಕ ಕೆಲಸಕ್ಕೆ ಹಾಜರಾಗಿರುವ ಮಹಿಳೆಯರು, ಪುರುಷ ಉದ್ಯೋಗಿಗಳಿಗಿಂತ ಮೇಲುಗೈ ಸಾಸಿರುವುದು ತಿಳಿದುಬಂದಿದೆ. ಹೊಸ ಹೊಸ ಐಡಿಯಾಗಳೊಂದಿಗೆ ಇವರೆಲ್ಲ ಮರುದಿನ ಕಚೇರಿಗೆ ಹಾಜರಾಗಿರುವುದು ಬಾಸ್‌ಗಳಿಗೂ ಖುಷಿ ತಂದಿದೆ. ಈ ಮಹಿಳಾ ಉದ್ಯೋಗಿಗಳು ಯಾವುದೇ ಕೆಲಸ ಕೊಟ್ಟರೂ ಟಾಟ್ ಎಂದು ಮುಗಿಸಿಕೊಟ್ಟಿದ್ದಾರಂತೆ. ನೀವೂ ಯಾಕೆ ಈ ವಿಚಾರವನ್ನು ಬಾಸ್ ಮುಂದೆ ಇಡಬಾರದು?