(ವಿಡಿಯೊ) ಕಾವೇರಿ ಸಂಗಮದಲ್ಲಿ ಜಲಾ ಸಮಾಧಿಯಾಗುತ್ತಿದ್ದ ಮೂವರ ಪ್ರವಾಸಿಗರ ರಕ್ಷಣೆ

ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ತೆಪ್ಪ ಮಗಚಿ ಜಲಾ ಸಮಾಧಿಯಾಗುತ್ತಿದ್ದ ಮೂವರ ಪ್ರವಾಸಿಗರ ರಕ್ಷಣೆ ಮಾಡಿದ ಘಟನೆ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್​ ಆಗಿದೆ. ಕಳೆದ ಎರಡು ದಿನಗಳ ಹಿಂದೆ ಕಾವೇರಿ ಸಂಗಮದಲ್ಲಿ ತೆಪ್ಪ ಮಗಚಿ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದ ಮೂವರು ಪ್ರವಾಸಿಗರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದ್ರೆ ಈ ವಿಷಯ ಬಹಿರಂಗಗೊಳಿಸದೆ ತಾಲೂಕು ಆಡಳಿತ, ಭದ್ರತೆಯ ನೆಪವೊಡ್ಡಿ ಸಂಗಮದಲ್ಲಿ ಕಾವೇರಿ ಪುಷ್ಕರ ಪುಣ್ಯಸ್ನಾನಕ್ಕೆ ನಿಷೇಧ ಹೇರಿದೆ.