ಮೆಲ್ಬೋರ್ನ್(ಜೂ 26 ) ಲಾಟರಿ ಹೊಡೆಯುವುದು ಅಂದ್ರೆ ಇದೇ ಇರಬೇಕು ಅಥವಾ ಲಾಟರಿ ಹೊಡೆದರೆ ಹೀಗೆ ಹೊಡೆಯಬೇಕು. ಲಾಟರಿ ಡ್ರಾವೊಂದರಲ್ಲಿ ಮೂರು ಅನಾಥ ಮಕ್ಕಳ ಅಜ್ಜ ಬರೋಬ್ಬರಿ 1 ಮಿಲಿಯನ್ ಡಾಲರ್ ಅಂದರೆ ಬರೋಬ್ಬರಿ ಆರು ಕೋಟಿ ಎಂಭತ್ತು ಲಕ್ಷ ರೂಪಾಯಿ ಬಹುಮಾನ ಗೆದ್ದಿದ್ದಾನೆ. ಇದೀಗ ಹೊಸ ಮನೆಯೊಂದನ್ನು ಖರೀದಿ ಮಾಡಬೇಕು ಎಂದು ಹುಡುಕುತ್ತಿದ್ದಾನೆ.

ಮೆಲ್ಬೋರ್ನ್ಸ್ ಹೊರವಲಯದ ನಿವಾಸಿ ಅಜ್ಜನ ಸಂತಸಕ್ಕೆ ಇದೀಗ ಪಾರವಿಲ್ಲದಂತಾಗಿದೆ. ನನಗೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಇಂಥದ್ದೊಂದು ಕ್ಷಣ ಬರುತ್ತದೆ ಎಂದು ಭಾವಿಸಿಯೇ ಇರಲಿಲ್ಲ ಎಂದು ಅಜ್ಜ ಸಂಭ್ರಮ ವ್ಯಕ್ತಪಡಿಸಿದ್ದಾರೆ. ನಾನು ಮೂರು ಅನಾಥ ಮಕ್ಕಳನ್ನು ಸಾಕುತ್ತಿದ್ದೇನೆ. ನನಗೆ ನಿಜಕ್ಕೂ ಹಣದ ಅಗತ್ಯ ಇತ್ತು. ಅದೃಷ್ಟ ನನ್ನ ಪಾಲಿಗೆ ಬಂದು ನಿಂತಿದೆ ಎಂದಿದ್ದಾರೆ.

ಓಝೋ ಲಾಟರಿಯಲ್ಲಿ ಹಣ ಗೆದ್ದಿದ್ದು ಅಜ್ಜನಿಗೆ ಗೊತ್ತೆ ಇರಲಿಲ್ಲ. ಸಾಕಿದ್ದ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವ ವೇಳೆ ಲಾಟರಿ ಸಂಸ್ಥೆಯ ಅಧಿಕಾರಿಗಳು ಅಜ್ಜನಿಗೆ ಸುದ್ದಿ ಮುಟ್ಟಿಸಿದ್ದಾರೆ. ಮೆಲ್ಬೋರ್ನ್ಸ್ ಹೊರವಲಯದ ನಿವಾಸಿಯಾಗಿದ್ದ ಬಡ ಅಜ್ಜ ಇದಿಗ ಒಂದೇ ದಿನ ಮಿಲೇನಿಯರ್ ಆಗಿದ್ದಾರೆ.