ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮೇಘಾಲಯ ರಾಜ್ಯಪಾಲ ವಿ.ಷಣ್ಮುಗನಾಥನ್‌ ಅವರು ನಿನ್ನೆ ರಾತ್ರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಷಣ್ಮುಗನಾಥನ್ ರಾಜಭವನವನ್ನು ಲೇಡಿಸ್ ಕ್ಲಬ್ ಮಾಡಿದ್ದಾರೆ ಎಂದು ಆರೋಪಿಲಾಗಿತ್ತು. ಈ ದೂರು ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಸೂಚನೆ ಬಂದಿದ್ದರಿಂದ ಅವರು ರಾಜ್ಯಪಾಲರ ಹುದ್ದೆ ತೊರೆದಿದ್ದಾರೆ ಎನ್ನಲಾಗುತ್ತಿದೆ.

ಮೇಘಾಲಯ(ಜ.27): ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಮೇಘಾಲಯ ರಾಜ್ಯಪಾಲ ವಿ.ಷಣ್ಮುಗನಾಥನ್‌ ಅವರು ನಿನ್ನೆ ರಾತ್ರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಷಣ್ಮುಗನಾಥನ್ ರಾಜಭವನವನ್ನು ಲೇಡಿಸ್ ಕ್ಲಬ್ ಮಾಡಿದ್ದಾರೆ ಎಂದು ಆರೋಪಿಲಾಗಿತ್ತು. ಈ ದೂರು ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಸೂಚನೆ ಬಂದಿದ್ದರಿಂದ ಅವರು ರಾಜ್ಯಪಾಲರ ಹುದ್ದೆ ತೊರೆದಿದ್ದಾರೆ ಎನ್ನಲಾಗುತ್ತಿದೆ.

ಲೈಂಗಿಕ ಕಿರುಕುಳ ಆರೋಪ ಪ್ರಕರಣದಲ್ಲಿ ರಾಜಭವನ ಸಿಬ್ಬಂದಿಯ ಆಕ್ರೋಶಕ್ಕೆ ಗುರಿಯಾಗಿದ್ದ ಮೇಘಾಲಯ ರಾಜ್ಯಪಾಲ ವಿ.ಷಣ್ಮುಗನಾಥನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 67 ವರ್ಷದ ಷಣ್ಮುಗನಾಥನ್‌ ಅವರು 2015ರಲ್ಲಿ ಎನ್​ಡಿಎ ಸರ್ಕಾರವು ಷಣ್ಮುಗನಾಥನ್'ರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಿತ್ತು. ರಾಜಭವನದಲ್ಲಿ ಪುರುಷ ಸಿಬ್ಬಂದಿಯನ್ನು ಎತ್ತಂಗಡಿ ಮಾಡಿ ಕೇವಲ ಮಹಿಳೆಯರನ್ನೇ ಕೆಲಸಕ್ಕೆ ನಿಯೋಜಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಇದ್ರಿಂದ ಬೇಸತ್ತ ನೂರಕ್ಕೂ ಹೆಚ್ಚು ಸಿಬ್ಬಂದಿ ರಾಷ್ಟ್ರಪತಿ, ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಪತ್ರವನ್ನೂ ಸಹ ಬರೆದು ವಜಾ ಮಾಡುವಂತೆ ಮನವಿ ಮಾಡಿದ್ದರು.

ಇನ್ನು ಈ ಹಿಂದೆ ಷಣ್ಮುಗನಾಥನ್​ರ ಕಿರುಕುಳಕ್ಕೆ ನೊಂದಿದ್ದ ಅಧಿಕಾರಿಯೊಬ್ಬರು ಕಳೆದ ವರ್ಷ ನವೆಂಬರ್ 3ರಂದು ಕಚೇರಿಯಲ್ಲೇ ಹೃದಯಾಘಾತದಿಂದ ನಿಧನರಾಗಿದ್ದರು. ಮಹಿಳೆಯರನ್ನು ರಾಜಭವನದಲ್ಲಿ ರಾತ್ರಿ ವೇಳೆಯೇ ಕೆಲಸಕ್ಕಿರುತ್ತಾರೆ. ಇದಲ್ಲದೆ, ರಾಜಭವನಕ್ಕೆ ಅವರ ಆಯ್ಕೆಯ ಮಹಿಳಾ ಸಿಬ್ಬಂದಿಗಷ್ಟೇ ಪ್ರವೇಶವಿದೆ ಎಂದೂ ಪತ್ರದಲ್ಲಿ ದೂರಲಾಗಿತ್ತು.

ಒಟ್ಟಿನಲ್ಲಿ ವಿ.ಷಣ್ಮುಗನಾಥನ್ ಅವರು ಮಾಡಿರುವ ಕೆಲಸ ರಾಜ್ಯಪಾಲ ಹುದ್ದೆಗೆ ಅವಮಾನ ಮಾಡಿದಂತಾಗಿದೆ.