ಆದರೆ ಬಿಜೆಪಿಯವರು ಹಿಂದುತ್ವ ತುರುಕಲು ಯತ್ನಿಸುತ್ತಿದ್ದಾರೆ. ಬುಡಕಟ್ಟು ಜನರಿಗೆ ತಮ್ಮದೇ ಆದ ಕಾನೂನುಗಳಿವೆ. ಗೋಮಾಂಸ ವಿಷಯ ಕೆದಕಿ ಜನರ ಭಾವನೆಗಳಿಗೆ ಬಿಜೆಪಿ ಧಕ್ಕೆ ತಂದಿದೆ: ಬಿಜೆಪಿ ಮುಖಂಡ

ನವದೆಹಲಿ: ಮೇಘಾಲಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಡಮೆ ದರಕ್ಕೆ ಗೋಮಾಂಸ ನೀಡುವುದಾಗಿ ಹೇಳಿ ವಿವಾದ ಎಬ್ಬಿಸಿದ್ದ ರಾಜ್ಯ ಬಿಜೆಪಿ ಮುಖಂಡ ಬರ್ನಾರ್ಡ್‌ ಮರಾಕ್‌ ಅವರು ಪಕ್ಷಕ್ಕೆ ಗುರುವಾರ ರಾಜೀನಾಮೆ ನೀಡಿದ್ದಾರೆ.

ಗಾರೋ ಗುಡ್ಡಗಾಡು ಭಾಗದ ಮುಖಂಡರಾದ ಮರಾಕ್‌ ಇತ್ತೀಚೆಗೆ ನೀಡಿದ ಹೇಳಿಕೆಯು ಪಕ್ಷದ ತತ್ವಕ್ಕೆ ವಿರುದ್ಧವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮರಾಕ್‌, ‘ನಾನು ಓರ್ವ ಕ್ರೈಸ್ತ. ನನಗೆ ಗಾರೋ ಜನರು ಮುಖ್ಯ. ಆದರೆ ಬಿಜೆಪಿಯವರು ಹಿಂದುತ್ವ ತುರುಕಲು ಯತ್ನಿಸುತ್ತಿದ್ದಾರೆ. ಬುಡಕಟ್ಟು ಜನರಿಗೆ ತಮ್ಮದೇ ಆದ ಕಾನೂನುಗಳಿವೆ. ಗೋಮಾಂಸ ವಿಷಯ ಕೆದಕಿ ಜನರ ಭಾವನೆಗಳಿಗೆ ಬಿಜೆಪಿ ಧಕ್ಕೆ ತಂದಿದೆ. ಈ ಕಾರಣಕ್ಕೆ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ' ಎಂದು ಹೇಳಿದ್ದಾರೆ.