ಇಂದು ಅಂಬಾನಿ ಜೆಟ್’ನಲ್ಲಿ ಶ್ರೀ ದೇವಿ ಮೃತದೇಹ ಭಾರತಕ್ಕೆ

Megastar Sridevis Body To Be Flown To Mumbai From Dubai Today
Highlights

ಶನಿವಾರ ಮಧ್ಯರಾತ್ರಿ ದುಬೈನಲ್ಲಿ ನಿಧನರಾದ ಬಾಲಿವುಡ್ ಹೆಸರಾಂತ ನಟಿ ಶ್ರೀದೇವಿ ಅವರ ಮೃತದೇಹ ಇಂದು ಮುಂಬೈಗೆ ಆಗಮಿಸುವ ಸಾಧ್ಯತೆ ಇದೆ.

ಮುಂಬೈ: ಶನಿವಾರ ಮಧ್ಯರಾತ್ರಿ ದುಬೈನಲ್ಲಿ ನಿಧನರಾದ ಬಾಲಿವುಡ್ ಹೆಸರಾಂತ ನಟಿ ಶ್ರೀದೇವಿ ಅವರ ಮೃತದೇಹ ಇಂದು ಮುಂಬೈಗೆ ಆಗಮಿಸುವ ಸಾಧ್ಯತೆ ಇದೆ.

13 ಆಸನವುಳ್ಳ  ಖಾಸಗಿ ಜಟ್'ಅನ್ನು ಉದ್ಯಮಿ ಅನಿಲ್ ಅಂಬಾನಿ ದುಬೈಗೆ ಕಳುಹಿಸಿದ್ದು ಇಂದು ಮೃತದೇಹ ಮುಂಬೈಗೆ ತರಲಾಗುತ್ತದೆ. ದುಬೈನಲ್ಲಿ ಮೃತದೇಹದ ಅಂತಿಮ ಪರೀಕ್ಷೆಗಳನ್ನು ನಡೆಸಲಾಗಿದೆ.

ಇಂದು ಮೃತದೇಹ ಆಗಮಿಸಿದ ಬಳಿಕ ಮುಂಬೈನಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಬಳಿಕ ಇಂದು ಅಥವಾ ನಾಳೆ ಅಂತ್ಯಸಂಸ್ಕಾರ ನೆರವೇರಿಸಲಾಗುತ್ತದೆ.

loader