ಕೇಂದ್ರ ಸರ್ಕಾರದಿಂದ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್. ಬರೋಬ್ಬರಿ 54 ಸಾವಿರ ಹುದ್ದೆಗಳಿಗೆ ಕೇಂದ್ರವು ನೇಮಕಾರಿ ಮಾಡಿಕೊಳ್ಳುತ್ತಿದೆ. 

ನವದೆಹಲಿ: ಕೇಂದ್ರ ಸರ್ಕಾರ ಸಶಸ್ತ್ರ ಪಡೆಗೆ ದೊಡ್ಡ ಸಂಖ್ಯೆಯ ಸಿಬ್ಬಂದಿ ನೇಮಕಾತಿಗೆ ಮುಂದಾಗಿದೆ. ಸಿಆರ್‌ಪಿಎಫ್, ಬಿಎಸ್‌ಎಫ್ ಮತ್ತು ಐಟಿಬಿಪಿಯಂತಹ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗೆ 54,000 ಜವಾನರ ಹುದ್ದೆ ತುಂಬಲು ನಿರ್ಧರಿಸಿದೆ. 

ಸಿಆರ್‌ಪಿಎಫ್, ಬಿಎಸ್‌ಎಫ್, ಐಟಿಬಿಪಿ ಮಾತ್ರವಲ್ಲದೆ, ಸಿಐಎಸ್‌ಎಫ್, ಎಸ್ ಎಸ್‌ಬಿ, ಅಸ್ಸಾಂ ರೈಫಲ್ಸ್, ಎನ್‌ಐಎ, ಎಸ್‌ಎಸ್ ಎಫ್ ಹುದ್ದೆಗಳೂ ಇದರಲ್ಲಿ ಒಳಗೊಂಡಿವೆ.ಇದು ಕೇಂದ್ರದ ಭದ್ರತಾ ಪೊಲೀಸ್ ಪಡೆಗಳಲ್ಲಿ ಅತಿದೊಡ್ಡ ನೇಮಕಾತಿ ಪ್ರಕ್ರಿಯೆ ಎನಿಸಲಿದೆ. 18- 23 ರ ವಯಸ್ಸಿನ, 10 ನೇ ತರಗತಿ ಪೂರ್ಣಗೊ ಳಿಸಿರುವವರು ಅರ್ಜಿ ಸಲ್ಲಿಸಲು ಅವಕಾಶವಿದೆ.